ಬೆಂಗಳೂರು: ಪ್ರವಾದಿ ಮೊಹಮ್ಮದ್ ಅವರ ಜೀವನ ಹಾಗೂ ಸಂದೇಶಗಳನ್ನು ಕರ್ನಾಟಕದಾದ್ಯಂತ ಪಸರಿಸುವ ನಿಟ್ಟಿನಲ್ಲಿ ಕೇರಳದ ಕೋಯಿಕ್ಕೋಡ್‌ನ ಮರ್ಕಝ್ ವಿದ್ಯಾಸಂಸ್ಥೆಯ ಕನ್ನಡ ವಿದ್ಯಾರ್ಥಿಗಳ ಸಂಘಟನೆ ‘ಕೆಎಸ್‌ಒ’ ಪದಾಧಿಕಾರಿಗಳು ‘ಜನಮಾನಸಗಳಿಗೆ ಪೈಗಂಬರ್’ ಎಂಬ ಅಭಿಯಾನ ಹಮ್ಮಿಕೊಂಡಿದ್ದಾರೆ. ‘ಮುಹಮ್ಮದ್’ ಎಂಬ ಪುಸ್ತಕವನ್ನು ಈ ಅಭಿಯಾನದ ಮೂಲಕ ಹಂಚುತ್ತಿದ್ದಾರೆ.
ಲೇಖಕ ಮಾರ್ಟಿನ್ ಲಿಂಗ್ಸ್ ಅವರು ಬರೆದಿರುವ ಸ್ವಾಲೀಹ್ ತೋಡಾರ್ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಪುಸ್ತಕವನ್ನು ರಾಜ್ಯದಾದ್ಯಂತ ವಿತರಿಸಲಾಗುತ್ತಿದೆ.
ಅಭಿಯಾನದ ಭಾಗವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ಪುಸ್ತಕವನ್ನು ನೀಡಲಾಯಿತು.
‘ಕೆಎಸ್‌ಒ ವಿದ್ಯಾರ್ಥಿ ಸಂಘಟನೆ ಮೂರು ದಶಕಗಳಿಂದ ಕೋಯಿಕ್ಕೋಡಿನಲ್ಲಿ ಕನ್ನಡ ಸೇವೆ ಮಾಡುತ್ತಿದ್ದು, ಜನರು ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಓದಿದಂತೆ ಪೈಗಂಬರರನ್ನು ಓದಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ’ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.