ಯಲಹಂಕ: ಶ್ರೀರಾಮನಹಳ್ಳಿಯಲ್ಲಿರುವ ಕೇಂದ್ರ ಗ್ರಾಮಾಭಿವೃದ್ಧಿ ಮಂಡಳಿ ಹಾಗೂ ಪೀಪಲ್ ಟ್ರಸ್ಟ್ ಸೇವಾಕೇಂದ್ರದ ಆಶ್ರಯದಲ್ಲಿ ನಡೆದ 21ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 22 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಧರ್ಮಸೇವಾ ಸಂಸ್ಥೆಯ ಸಂಸ್ಥಾಪಕ ಧರ್ಮದರ್ಶಿ ಎನ್.ಸಿ. ನಾಣಯ್ಯ ಅವರ ಸ್ಮರಣಾರ್ಥವಾಗಿ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು.
‘ನವ ಜೋಡಿಗಳಿಗೆ ಬಟ್ಟೆ, ತಾಳಿ, ಕಾಲುಂಗುರ, ಗೃಹಪಯೋಗಿ ವಸ್ತುಗಳು ಹಾಗೂ ಪ್ರಮಾಣಪತ್ರ ನೀಡಲಾಗಿದೆ’ ಎಂದು ಸಂಸ್ಥೆಯ ಕೇಂದ್ರ ಗ್ರಾಮಾಭಿವೃದ್ಧಿ ಮಂಡಳಿ ಕಾರ್ಯಾಧ್ಯಕ್ಷ ಸಿ. ವೆಂಕಟೇಶ್ ತಿಳಿಸಿದರು.
ಶಾಸಕ ಎಸ್.ಆರ್. ವಿಶ್ವನಾಥ್, ಪೀಪಲ್ ಟ್ರಸ್ಟ್ ಸೇವಾ ಕೇಂದ್ರದ ಅಧ್ಯಕ್ಷ ಸಿ.ಯು. ಭಾಸ್ಕರ್, ವ್ಯವಸ್ಥಾಪಕ ಟ್ರಸ್ಟಿ ಎನ್.ಎನ್. ಹರೀಶ್ ಹುತ್ತಯ್ಯ, ಯೋಜನಾ ವ್ಯವಸ್ಥಾಪಕ ಎಂ. ರಾಮಸ್ವಾಮಿ ಕೇಂದ್ರ ಗ್ರಾಮಾಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ಮುನಿರೆಡ್ಡಿ, ಕಾರ್ಯದರ್ಶಿ ಬೆಟ್ಟೇನಹಳ್ಳಿ ರಾಜಣ್ಣ, ಸಂಚಾಲಕರಾದ ಎಸ್.ಜಿ.ನರಸಿಂಹಮೂರ್ತಿ, ಎಸ್.ಎಚ್.ಅಪ್ಪಣ್ಣಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.