ಬೆಂಗಳೂರು: ಕೇರಳದ ಮಾತಾ ಅಮೃತಾನಂದಮಯಿ ಮಠವು ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ಹಾನಿಗೀಡಾದ ಪ್ರೆದೇಶದಲ್ಲಿನ ದುರಂತ ಪರಿಹಾರಕ್ಕಾಗಿ ₹15 ಕೋಟಿ ವೆಚ್ಚದಲ್ಲಿ ‘ಅಮೃತ ಭೂಕುಸಿತ ಮುನ್ನೆಚ್ಚರಿಕೆ ವ್ಯವಸ್ಥೆ’ ರೂಪಿಸಿದೆ.
ಮಾತಾ ಅಮೃತಾನಂದಮಯಿ ದೇವಿ ಅವರ 71ನೇ ಜನ್ಮದಿನಾಚರಣೆ ಪ್ರಯುಕ್ತ ಈ ಯೋಜನೆಯನ್ನು ಅಮೃತ್ ವಿದ್ಯಾಪೀಠದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇದು ಭೂಕುಸಿತ ದುರಂತ ಹಾಗೂ ಜೀವಹಾನಿ ತಡೆಯುವ ಪ್ರಯತ್ನವಾಗಿದೆ. ಕೇರಳ ಸರ್ಕಾರದಿಂದ ಅನುಮತಿ ದೊರೆತ ಬಳಿಕ ಯೋಜನೆ ಪ್ರಾರಂಭಿಸಲಾಗುತ್ತದೆ ಎಂದು ಮಠ ತಿಳಿಸಿದೆ.
ಮಠದ ಉಪಾಧ್ಯಕ್ಷ ಸ್ವಾಮಿ ಅಮೃತಸ್ವರೂಪಾನಂದ ಪುರಿ, ‘ವಯನಾಡು ದುರಂತದಲ್ಲಿ ಬದುಕುಳಿದವರಿಗೆ ಪರಿಹಾರವು ತ್ವರಿತವಾಗಿ ದೊರಕಬೇಕು ಎಂದು ಅಮ್ಮ ಬಯಸುತ್ತಾರೆ. ಆದ್ದರಿಂದ ₹ 15 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಭೂ ಕುಸಿತದ ಬಗ್ಗೆ ಮುನ್ನೆಚ್ಚರಿಕೆ ಒದಗಿಸುವ ಈ ವ್ಯವಸ್ಥೆಗೆ ಸರ್ಕಾರದ ಅನುಮೋದನೆ ದೊರೆತ ಬಳಿಕ ಅನುಷ್ಠಾನ ಮಾಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.