ADVERTISEMENT

ಹೆರಿಗೆ ಭತ್ಯೆ ₹ 10 ಸಾವಿರ, ವೈದ್ಯಕೀಯ ನೆರವು ₹ 25 ಸಾವಿರಕ್ಕೆ ಏರಿಕೆ

ಸಂಘಟಿತ ಕಾರ್ಮಿಕರ ಧನ ಸಹಾಯ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 21:39 IST
Last Updated 29 ಜೂನ್ 2021, 21:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯು ಸಂಘಟಿತ ಕಾರ್ಮಿಕರ ವಿವಿಧ ಕಲ್ಯಾಣ ಯೋಜನೆಗಳ ಧನ ಸಹಾಯದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ ₹ 10 ಸಾವಿರ ನೀಡಲು ನಿರ್ಧರಿಸಲಾಗಿದೆ.

ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗೆ ಕಲ್ಯಾಣ ಯೋಜನೆಯ ಸೌಲಭ್ಯಗಳ ಸಹಾಯಧನವನ್ನು ಹೆಚ್ಚಿಸುವಂತೆ ಕಾರ್ಮಿಕ ಸಂಘಟನೆಗಳು ಮತ್ತು ಕಾರ್ಮಿಕ ಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು.

ಪರಿಷ್ಕೃತ ಸಹಾಯಧನ: ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ₹ 15,000 ದಿಂದ ₹ 21,000, ಕಾರ್ಮಿಕರಿಗೆ ವೈದ್ಯಕೀಯ ನೆರವು ₹ 10,000 ದಿಂದ ₹ 25,000, ಕಾರ್ಮಿಕರಿಗೆ ಅಪಘಾತ ಧನ ಸಹಾಯ ₹ 3,000 ದಿಂದ ₹ 10,000, ಮೃತ ಕಾರ್ಮಿಕನಅಂತ್ಯ ಸಂಸ್ಕಾರಕ್ಕೆ ಧನ ಸಹಾಯ ₹ 5,000 ದಿಂದ ₹ 10,000 ಹೆಚ್ಚಿಸಲಾಗಿದೆ.

ADVERTISEMENT

ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರ ಹಮ್ಮಿಕೊಳ್ಳುವ ಕಾರ್ಮಿಕ ಸಂಘಟನೆಗಳಿಗೆ ಧನ ಸಹಾಯ ₹ 30 ಸಾವಿರದಿಂದ ₹ 1ಲಕ್ಷ, ವಾರ್ಷಿಕ ಕ್ರೀಡಾಕೂಟಕ್ಕೆ ಧನ ಸಹಾಯ ₹ 50 ಸಾವಿರದಿಂದ ₹ 1 ಲಕ್ಷ, ಸಂಘಟಿತ ಮಹಿಳಾ ಕಾರ್ಮಿಕರಿಗೆ ಮೊದಲ ಎರಡು ಮಕ್ಕಳಿಗೆ ಹೆರಿಗೆ ಭತ್ಯೆ ₹ 10 ಸಾವಿರ ನೀಡಲಾಗುವುದು. ಪರಿಷ್ಕರಿಸಿದ ಮೊತ್ತ ಮತ್ತು ಹೊಸದಾಗಿ ಅನುಷ್ಠಾನಗೊಳಿಸಿದ ಯೋಜನೆ ವೆಚ್ಚವನ್ನು ಮಂಡಳಿಯಲ್ಲಿ ಕಾರ್ಮಿಕರಿಂದ ಮತ್ತು ಸಂಸ್ಥೆ/ಕಾರ್ಖಾನೆ/ ಮಾಲೀಕರಿಂದ ಸಂಗ್ರಹವಾಗಿರುವ ಮೊತ್ತದಲ್ಲಿ 20:40 ಅನುಪಾತದಲ್ಲಿ ಭರಿಸಲಾಗುವುದು ಎಂದು ಆದೇಶ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.