ADVERTISEMENT

ಮೇಡಹಳ್ಳಿ: ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 14:03 IST
Last Updated 20 ನವೆಂಬರ್ 2024, 14:03 IST
ಮೇಡಹಳ್ಳಿ ಗ್ರಾಮದಲ್ಲಿ ಸಾವಿರ ಸಸಿ ನೆಡುವ ಅಭಿಯಾನಕ್ಕೆ ಮೇಡಹಳ್ಳಿ ಮಲ್ಲೇಶ್ ಚಾಲನೆ ನೀಡಿದರು.  
ಮೇಡಹಳ್ಳಿ ಗ್ರಾಮದಲ್ಲಿ ಸಾವಿರ ಸಸಿ ನೆಡುವ ಅಭಿಯಾನಕ್ಕೆ ಮೇಡಹಳ್ಳಿ ಮಲ್ಲೇಶ್ ಚಾಲನೆ ನೀಡಿದರು.     

ಕೆ.ಆರ್.ಪುರ: ಮೇಡಹಳ್ಳಿ ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ಖಾಲಿ ಸ್ಥಳಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಮೇಡಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಮೇಡಹಳ್ಳಿ ಮಲ್ಲೇಶ್ ಹೇಳಿದರು.

ಕೆ.ಆರ್.ಪುರ ಸಮೀಪದ ಮೇಡಹಳ್ಳಿಯಲ್ಲಿ ನೂರಕ್ಕೂ ಹೆಚ್ಚು ಸ್ವಯಂ ಸೇವಕರೊಂದಿಗೆ ಒಂದು ಸಾವಿರ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮೇಡಹಳ್ಳಿ ಗ್ರಾಮವನ್ನು ಹಸಿರಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಗ್ರಾಮದ ವಿವಿಧ ಬಡಾವಣೆಗಳ ಸಾರ್ವಜನಿಕರ ನೆರವಿನಿಂದ ನಿರಂತರವಾಗಿ ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಹೊಣೆ ಹೊತ್ತಿದ್ದೇವೆ. ಸ್ವಯಂ ಸೇವಕರ ತಂಡ ಅಭಿಯಾನದ ನಿರ್ವಹಣೆ ಹೊತ್ತಿದೆ’ ಎಂದರು.

ADVERTISEMENT

ಗ್ರಾಮದ ಮುಖಂಡ ಕೋದಂಡರಾಮಯ್ಯ ಮಾತನಾಡಿ, ಗ್ರಾಮವನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಅಭಿಯಾನಕ್ಕೆ ಗ್ರಾಮಸ್ಥರ ಸಂಪೂರ್ಣ ಸಹಕಾರ ಇರಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕೃಷ್ಣಮೂರ್ತಿ, ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.