ADVERTISEMENT

ಕೃಷಿಗೆ ₹520 ಕೋಟಿ ಮಂಜೂರು ಮಾಡಿದ ಬ್ಯಾಂಕ್‌ ಆಫ್ ಬರೋಡಾ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 6:43 IST
Last Updated 24 ಅಕ್ಟೋಬರ್ 2019, 6:43 IST
ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ₹5 ಕೋಟಿ ಚೆಕ್‌ ಅನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಮುರಳಿ ರಾಮಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಶಾಸಕ ಅರವಿಂದ ಲಿಂಬಾವಳಿ, ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್, ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ, ಬ್ಯಾಂಕ್‌ನ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕ ಎಸ್.ಎ.ಸುದರ್ಶನ್‌, ಬೀರೇಂದ್ರ ಕುಮಾರ್‌ ಇದ್ದರು.

ಬೆಂಗಳೂರು: ವಿಶ್ವ ಆಹಾರ ದಿನದ ಅಂಗವಾಗಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಹೊಸಕೋಟೆ ಬಳಿ ಆಯೋಜಿಸಿದ್ದ ‘ಮೆಗಾ ಕೃಷಿ ಮೇಳ’ವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.

ವಿವಿಧ ಸಾಲ ಸೌಲಭ್ಯಗಳಡಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆಗಳ ಫಲಾನುಭವಿಗಳಿಗೆ ಅವರು ಚೆಕ್‌ ವಿತರಿಸಿ, ರೈತರು ತಂತ್ರಜ್ಞಾನದ ಲಾಭ ‍ಪಡೆಯಬೇಕು ಎಂದರು.

ಬ್ಯಾಂಕ್‌ ಆಫ್‌ ಬರೋಡಾ ಬೆಂಗಳೂರು ವಲಯವು ಕೃಷಿ ಹಾಗೂ ರೈತರ ಅಭಿವೃದ್ಧಿಗಾಗಿ ₹520 ಕೋಟಿ ಮಂಜೂರು ಮಾಡಿತು. ಕಾರ್ಯಕ್ರಮದಲ್ಲಿ ಐವರು ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಮೇಳದಲ್ಲಿ ಕೃಷಿ ತಳಿಗಳು, ಯಂತ್ರೋಪಕರಣಗಳು, ನೀರಾವರಿ ತಂತ್ರಜ್ಞಾನಗಳು ಹಾಗೂ ತೋಟಗಾರಿಕಾ ನೂತನ ತಳಿಗಳ ಪ್ರದರ್ಶನಕ್ಕಾಗಿ 50ಕ್ಕೂ ಹೆಚ್ಚು ಮಳಿಗೆಗಳಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.