ADVERTISEMENT

ಮಾನಸಿಕ ಸಮಸ್ಯೆ: ಒತ್ತಡದಲ್ಲಿ ಶೇ 70 ರಷ್ಟು ವಯಸ್ಕರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 17:14 IST
Last Updated 10 ಆಗಸ್ಟ್ 2023, 17:14 IST
ಸಮಗ್ರ ಮಾನಸಿಕ ಆರೋಗ್ಯ - ಅನಾರೋಗ್ಯ
ಸಮಗ್ರ ಮಾನಸಿಕ ಆರೋಗ್ಯ - ಅನಾರೋಗ್ಯ   

ಬೆಂಗಳೂರು: ವಯಸ್ಕರಲ್ಲಿ ಶೇ 70 ರಷ್ಟು ಮಂದಿ ಒತ್ತಡದಲ್ಲಿದ್ದರೆ, ಉದ್ಯೋಗಸ್ಥರಲ್ಲಿ ಶೇ 50 ರಷ್ಟು ಮಂದಿ ಕೆಲಸ ಹಾಗೂ ವೃತ್ತಿಗೆ ಹೊಂದಿಕೊಳ್ಳಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ಮೈಂಡ್‌ಪೀರ್ಸ್ ವೇದಿಕೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ. 

ವೇದಿಕೆಯು ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ 72,500 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿತ್ತು.

‘ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 30 ರಷ್ಟು ಮಂದಿ ಸಂಬಂಧಿಗಳು ಮತ್ತು ಕುಟುಂಬದ ಸದಸ್ಯರಿಂದ ಒತ್ತಡ ಎದುರಿಸುತ್ತಿದ್ದಾರೆ. ಹೆಚ್ಚುತ್ತಿರುವ ಒಂಟಿತನದಿಂದ ಶೇ 25 ರಷ್ಟು ಜನರು ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಶೇ 20 ರಷ್ಟು ಜನರು ತಮ್ಮ ಪ್ರಸ್ತುತ ಅಥವಾ ಭವಿಷ್ಯದ ಆರ್ಥಿಕ ಪರಿಸ್ಥಿತಿಯಿಂದಾಗಿ ಒತ್ತಡ ಅನುಭವಿಸುತ್ತಿದ್ದಾರೆ. ಶೇ 89 ರಷ್ಟು ಜನರು ತಮ್ಮ ಬಳಿ ಎಷ್ಟು ಹಣವಿದೆ ಎಂದು ನಿರಂತರ ಯೋಚಿಸುತ್ತಿರುತ್ತಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

‘ಯುವಜನರಲ್ಲಿ ಹೆಚ್ಚಿನವರು ಒತ್ತಡದ ಜೀವನ ನಡೆಸುತ್ತಿದ್ದಾರೆ. ಇದರಿಂದ ಕೆಲವರು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಪೋಷಕರು, ಶಿಕ್ಷಣ ಸಂಸ್ಥೆಗಳು ಯುವಜನರ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕಾಗಿದೆ’ ಎಂದು ವೇದಿಕೆಯ ಸಹ ಸಂಸ್ಥಾಪಕಿ ಕನಿಕಾ ಅಗರ್ವಾಲ್ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.