ADVERTISEMENT

ಕೆಂಗೇರಿಯಿಂದ ಮೆಟ್ರೊ ಫೀಡರ್ ಬಸ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 19:53 IST
Last Updated 13 ಜುಲೈ 2024, 19:53 IST
   

ಬೆಂಗಳೂರು: ಕೆಂಗೇರಿ ‘ನಮ್ಮ ಮೆಟ್ರೊ’ ನಿಲ್ದಾಣದಿಂದ ಗೊಟ್ಟಿಗೆರೆ ನೈಸ್‌ರೋಡ್‌ ಜಂಕ್ಷನ್‌ಗೆ ಹೊಸ ಮೆಟ್ರೊ ಫೀಡರ್‌ ಮಾರ್ಗವನ್ನು ಬಿಎಂಟಿಸಿ ಜುಲೈ 15ರಿಂದ ಪರಿಚಯಿಸುತ್ತಿದೆ.

ಮೆಟ್ರೊ ಫೀಡರ್‌ ಬಸ್‌ ಕೆಂಗೇರಿ ಟಿಟಿಎಂಸಿ, ಶ್ರೀನಿವಾಸಪುರ ಕ್ರಾಸ್, ಕರಿಯನಪಾಳ್ಯ, ಕರಿಷ್ಮ ಹಿಲ್ಸ್, ರಘುವನಹಳ್ಳಿ ಕ್ರಾಸ್, ಆವಲಹಳ್ಳಿ ಬಿಡಿಎ ಲೇಔಟ್, ಅಂಜನಪುರ ಮೂಲಕ ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್‌ಗೆ ತಲುಪಲಿದೆ. ಅದೇ ಮಾರ್ಗದಲ್ಲಿ ವಾಪಸ್ಸಾಗಲಿದೆ. ದಿನಕ್ಕೆ 40 ಟ್ರಿಪ್‌ಗಳು ಇರಲಿವೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT