ADVERTISEMENT

ಮೆಟ್ರೊ ಸ್ಟೇಷನ್‌–ಐಕಿಯಾ ನಡುವೆ ‘ಫುಟ್‌ ಬ್ರಿಡ್ಜ್‌’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 13:59 IST
Last Updated 18 ಅಕ್ಟೋಬರ್ 2023, 13:59 IST
<div class="paragraphs"><p>ನಾಗಸಂದ್ರ ಮೆಟ್ರೊ ಸ್ಟೇಷನ್‌ನಿಂದ ಐಕಿಯಾ ಮಳಿಗೆಗೆ ನೇರ ಸಂಪರ್ಕ ಸೇತುವೆ(ಫುಟ್ ಓವರ್ ಬ್ರಿಡ್ಜ್)ಯನ್ನು ಬಿಎಂಆರ್‌ಸಿಎಲ್&nbsp; ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಉದ್ಘಾಟಿಸಿದರು. ಐಕಿಯಾ ಮಾರ್ಕೆಟಿಂಗ್ ವ್ಯವಸ್ಥಾಪಕಿ ಅಂಜೆ ಹೇಯಿಮ್ ಇದ್ದರು.</p></div>

ನಾಗಸಂದ್ರ ಮೆಟ್ರೊ ಸ್ಟೇಷನ್‌ನಿಂದ ಐಕಿಯಾ ಮಳಿಗೆಗೆ ನೇರ ಸಂಪರ್ಕ ಸೇತುವೆ(ಫುಟ್ ಓವರ್ ಬ್ರಿಡ್ಜ್)ಯನ್ನು ಬಿಎಂಆರ್‌ಸಿಎಲ್  ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಉದ್ಘಾಟಿಸಿದರು. ಐಕಿಯಾ ಮಾರ್ಕೆಟಿಂಗ್ ವ್ಯವಸ್ಥಾಪಕಿ ಅಂಜೆ ಹೇಯಿಮ್ ಇದ್ದರು.

   

ಪೀಣ್ಯ ದಾಸರಹಳ್ಳಿ: ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ಐಕಿಯಾ ಫರ್ನೀಚರ್‌ ಸ್ಟೋರ್‌ಗೆ ಸಂಪರ್ಕ ಕಲ್ಪಿಸುವ ನೂತನ ’ನೇರ ಸಂಪರ್ಕ ಸೇತುವೆ’(ಫುಟ್‌ ಓವರ್‌ ಬ್ರಿಡ್ಜ್‌) ಅನ್ನು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ನ(ಬಿಎಂಆರ್‌ಸಿಎಲ್‌) ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್‌. ಶಂಕರ್ ಬುಧವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ನಮ್ಮ ಮೆಟ್ರೊ’ ನಿಲ್ದಾಣದಿಂದ ಐಕಿಯಾ ಸ್ಟೋರ್‌ ತಲುಪಲು ’ನೇರ ಸಂಪರ್ಕ ಸೇತುವೆ‘ ಕಲ್ಪಿಸಿರುವುದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ. ಈಗಾಗಲೇ ಮಂತ್ರಿಸ್ಕ್ವೇರ್‌ ಮೆಟ್ರೊ ಸ್ಟೇಷನ್‌ನಿಂದ ಮಂತ್ರಿ ಮಾಲ್‌ಗೆ ಇಂಥದ್ದೊಂದು ನೇರ ಸಂಪರ್ಕ ಸೇತುವೆ ನಿರ್ಮಾಣವಾಗಿದೆ. ಇದು ಎರಡನೆಯದು’ ಎಂದರು.

ADVERTISEMENT

‘ನಾಗಸಂದ್ರದಿಂದ ಬಿಐಇಸಿವರೆಗೂ ಮೆಟ್ರೊ ಮಾರ್ಗ ವಿಸ್ತರಿಸಲಾಗುತ್ತಿದೆ. ಸದ್ಯಕ್ಕೆ ನೆಲಮಂಗಲಕ್ಕೆ ವಿಸ್ತರಿಸುವ ಯೋಚನೆ ಇಲ್ಲ‘ ಎಂದ ಅವರು, ’ದಾಸರಹಳ್ಳಿ ಮೆಟ್ರೊ ನಿಲ್ದಾಣದ ಹತ್ತಿರ ಸ್ಕೈವಾಕ್ ಮಾಡಬೇಕಿದೆ. ಅದನ್ನು ಬಿಎಂಆರ್‌ಸಿಲ್ ಅಥವಾ ಬಿಬಿಪಿಎಂಪಿ ಯಾರು ನಿರ್ಮಿಸಬೇಕೆಂದು ತಿಳಿದ ಮೇಲೆ ಮಾಹಿತಿ ನೀಡಲಾಗುತ್ತದೆ’ ಎಂದು ಮಾಧ್ಯಮದವರಿಗೆ ಉತ್ತರಿಸಿದರು.

ಐಕಿಯಾದ ಮಾರ್ಕೆಟಿಂಗ್ ವ್ಯವಸ್ಥಾಪಕಿ ಅಂಜೆ ಹೇಯಿಮ್ ಮಾತನಾಡಿ 'ನೇರ ಸಂಪರ್ಕ ಸೇತುವೆ, ಪ್ರಯಾಣಿಕರು, ಗ್ರಾಹಕರು ಹಾಗೂ ಸ್ಟೋರ್‌ನ ಕೆಲಸಗಾರು ಸುಲಭವಾಗಿ ಐಕಿಯಾ ಸ್ಟೋರ್‌ ಪ್ರವೇಶಿಸಲು ಅನುಕೂಲ ಕಲ್ಪಿಸುತ್ತದೆ. ಹೆಚ್ಚು ಗ್ರಾಹಕರನ್ನು ಮೆಟ್ರೊದಲ್ಲಿ ಸಂಚರಿಸುವಂತೆ ಪ್ರೋತ್ಸಾಹಿಸುತ್ತದೆ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.