ಬೆಂಗಳೂರು: ಮೆಟ್ರೊ ರೈಲು ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಂಡಿದ್ದು, ಎಂ.ಜಿ. ರಸ್ತೆ ಯಿಂದ ಬೈಯಪ್ಪನಹಳ್ಳಿ ತನಕ ರೈಲುಗಳ ಸಂಚಾರಶನಿವಾರ ರಾತ್ರಿ 9.30ರ ನಂತರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ಎಂ.ಜಿ.ರಸ್ತೆ ಮತ್ತು ಟ್ರಿನಿಟಿ ಮೆಟ್ರೊ ನಿಲ್ದಾಣಗಳ ನಡುವೆ ಕಾಮ ಗಾರಿ ನಿರ್ವಹಿಸಲಾಗುತ್ತಿದೆ. ಬೈಯಪ್ಪನಹಳ್ಳಿಯಿಂದ ಅಂದು ಕೊನೆಯ ರೈಲು ರಾತ್ರಿ 9.30ಕ್ಕೆ ಹೊರಡಲಿದೆ. ಬೈಯಪ್ಪನಹಳ್ಳಿ ತನಕ ಹೋಗುವ ಕೊನೆಯ ರೈಲು ಕೆಂಗೇರಿ ಮೆಟ್ರೊ ನಿಲ್ದಾಣದಿಂದಲೂ 8.40ಕ್ಕೆ ಹೊರಡಲಿದೆ.
ರಾತ್ರಿ 9.30ರ ನಂತರ ಕೆಂಗೇರಿಯಿಂದ ಎಂ.ಜಿ.ರಸ್ತೆ ತನಕ ಮಾತ್ರ ರೈಲುಗಳು ಸಂಚರಿಸಲಿವೆ. ಭಾನುವಾರ ಬೆಳಿಗ್ಗೆ ವೇಳೆಗೆ ಕಾಮ
ಗಾರಿ ಪೂರ್ಣಗೊಳ್ಳಲಿದ್ದು, ಬೆಳಿಗ್ಗೆ 7 ಗಂಟೆಯಿಂದ ವೇಳಾಪಟ್ಟಿಯಂತೆ ಎಲ್ಲ ಮಾರ್ಗಗಳಲ್ಲೂ ರೈಲುಗಳ ಸಂಚಾರ ಪುನರ್ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.