ADVERTISEMENT

ಹಾಲಿನ ದರ ಏರಿಕೆ ಹೇಳಿಕೆ ಆಘಾತಕಾರಿ: ಎಸ್‌ಯುಸಿಐ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:16 IST
Last Updated 14 ಸೆಪ್ಟೆಂಬರ್ 2024, 15:16 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಹಾಲಿನ ದರ ಏರಿಕೆ ಮಾಡುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಾಮಾನ್ಯ ಜನರಿಗೆ ಆಘಾತಕಾರಿಯಾಗಿದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ– ಕಮ್ಯೂನಿಸ್ಟ್(ಎಸ್‌ಯುಸಿಐ) ಟೀಕಿಸಿದೆ.

‘ಆದಾಯ ಹೆಚ್ಚಳಕ್ಕಾಗಿ ಒಂದು ಲೀಟರ್‌ ಹಾಲಿಗೆ ₹ 5 ಹೆಚ್ಚಿಸುವಂತೆ ಹೈನುಗಾರರು ಬೇಡಿಕೆ ಇಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹೈನುಗಾರರ ಆದಾಯ ಹೆಚ್ಚಿಸಬೇಕಿದ್ದರೆ ಹೈನುಗಾರಿಕೆಯ ವೆಚ್ಚವನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳಬೇಕು. ಪಶು ಆಹಾರಗಳ ಬೆಲೆಯನ್ನು ಕಡಿಮೆ ಮಾಡಬೇಕು. ರೈತರ ಹೊರೆಯನ್ನು ಇಳಿಸಬೇಕು. ಅದನ್ನು ಬಿಟ್ಟು ರೈತರ ಹೊರೆಯನ್ನು ಸಾಮಾನ್ಯ ಜನರ ಹೆಗಲಿಗೆ ವರ್ಗಾಯಿಸುವುದು ಜನವಿರೋಧಿ ಕ್ರಮ ಎಂದು ಎಸ್‌ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಉಮಾ ಖಂಡಿಸಿದ್ದಾರೆ.

ADVERTISEMENT

ಹಾಲಿನ ದರ ಏರಿಸುವ ಆಲೋಚನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.