ಬೆಂಗಳೂರು: ವಸತಿ ಹಾಗೂ ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಹಜ್ ಯಾತ್ರೆ ಕೈಗೊಂಡ ಯಾತ್ರಿಗಳಿಗೆ ಶುಕ್ರವಾರ ಶುಭ ಕೋರಿ ಬೀಳ್ಕೊಟ್ಟರು.
ಜಮೀರ್ ಅಹಮದ್ ಅವರು ಯಾತ್ರಿಗಳಿಗೆ ಹಜ್ ಭವನದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಚಿತ ಬಸ್ ಹಾಗೂ ನಿತ್ಯ 35 ಸಾವಿರ ಜನರಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿಸಿದ್ದರು.
ಕಳೆದ ವರ್ಷ ಹಜ್ ಯಾತ್ರೆ ಸಂದರ್ಭದಲ್ಲಿ ಊಟದ ವ್ಯವಸ್ಥೆಯಲ್ಲಿ ಸಮಸ್ಯೆಯಾಗಿದ್ದರಿಂದ ಸಚಿವರೇ ಈ ಬಾರಿ ಖುದ್ದು ಆಸಕ್ತಿ ವಹಿಸಿ ಊಟ ಹಾಗೂ ಸಾರಿಗೆ ವ್ಯವಸ್ಥೆ ಮಾಡಿಸಿದ್ದಾರೆ. ಜೂನ್ 6 ರಿಂದ 22 ರವರೆಗೆ ಒಟ್ಟು 6 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿಸಲಾಗಿದೆ. ಇದಕ್ಕೆ ಯಾತ್ರಿಗಳಿಂದ ಪ್ರಶಂಸೆ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.