ಬೆಂಗಳೂರು: ನಗರದ ಚೋಳೂರು ಪಾಳ್ಯದ ಅನುದಾನಿತ ಕನ್ನಡ ಪ್ರೌಢಶಾಲೆಯ ಬಳಿ ಅನಧಿಕೃತವಾಗಿ ಆರಂಭವಾಗಿರುವ ಶ್ವೇತಾ ಪಬ್ಲಿಕ್ ಶಾಲೆಯನ್ನು (ಸೇಂಟ್ ಮಿರಾಸ್ ಪಬ್ಲಿಕ್ ಶಾಲೆ) ರದ್ದುಪಡಿಸುವಂತೆಶಿಕ್ಷಣಸಚಿವಎಸ್.ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಈ ಶಾಲೆಯನ್ನು ಅನುಮತಿ ಇಲ್ಲದೆ ಆರಂಭಿಸಲಾಗಿದ್ದು,ಅಧಿಕೃತ ಕನ್ನಡ ಶಾಲೆಗೆ ಧಕ್ಕೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಶಿಕ್ಷಣ ಸಚಿವರನ್ನು ಕೋರಿದರು. ಅದರಂತೆ ಅನಧಿಕೃತ ಶ್ವೇತಾ ಪಬ್ಲಿಕ್ ಶಾಲೆಯನೊಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.