ADVERTISEMENT

ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ: ಕಿರಿಯ ವೈದ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 6:54 IST
Last Updated 2 ನವೆಂಬರ್ 2019, 6:54 IST
   

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಿರಿಯ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಶನಿವಾರವೂ ಪ್ರತಿಭಟನೆ ಮುಂದುವರಿಸಿದರು.

ಮಿಂಟೋದಲ್ಲಿ ಸುಮಾರು 70 ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. ವಿಕ್ಟೋರಿಯಾ, ವಾಣಿ ವಿಲಾಸ್ ಸೇರಿ ಒಟ್ಟು 500 ಕಿರಿಯ ವೈದ್ಯರಿದ್ದಾರೆ. ರಕ್ಷಣೆ ಸಿಗುವ ತನಕ ಕರ್ತವ್ಯಕ್ಕೆ ಹಾಜರಾಗದಿರಲು ಕಿರಿಯ ವೈದ್ಯರ ತೀರ್ಮಾನಿಸಿದ್ದಾರೆ.

'ವೈದ್ಯರ ಮೇಲೆ ಹಿಂದಿನಿಂದಲೂ ಹಲ್ಲೆ ನಡೆಯುತ್ತಲೇ ಇದೆ. ದೃಷ್ಟಿಗೆ ಸಂಬಂಧಪಟ್ಟಂತೆ ಒಂದು ಸಮಸ್ಯೆ ಎದುರಾಗಿದೆ. ಆ ಪ್ರಕರಣ ನ್ಯಾಯಾಲಯದ ನ್ಯಾಯಾಲಯದಲ್ಲಿರುವಾಗ ಹಲ್ಲೆ ಯಾಕೆ. ಪ್ರಚಾರದ ಹುಚ್ಚಿನಿಂದ ಈ ರೀತಿಯ ಹಲ್ಲೆ ಮಾಡಿದ್ದಾರೆ' ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷ ಡಾ. ರವೀಂದ್ರ ಹೇಳಿದರು.

ADVERTISEMENT

'ಶುಕ್ರವಾರ ಹಲ್ಲೆ ಮಾಡಿದ ಹೆಣ್ಣು ಮಗಳು (ಅಶ್ವಿನಿ ಗೌಡ) ಒಂದು ತಿಂಗಳ ಹಿಂದೆ ಕೂಡಾ ಹಲ್ಲೆ ನಡೆಸಿದ್ದಾರೆ. ಕನ್ನಡ ಮಾತಾಡಿ ಎಂದು ಹಲ್ಲೆ ಮಾಡಿರುವುದು ತಪ್ಪು. ಕನ್ನಡ ಹೇರಿಕೆ ತಪ್ಪು, ಪ್ರೀತಿಯಿಂದ ಕನ್ನಡ ಕಲಿಸಬೇಕು'

'ಕರ್ನಾಟಕ ರಕ್ಷಣಾ ವೇದಿಕೆ ಮೇಲೆ, ನಾರಾಯಣ ಗೌಡ ಮೇಲೆ ಗೌರವ ಇದೆ. ಕಾರ್ಯಕರ್ತರು ಹಲ್ಲೆ ನಡೆಸಿರುವುದು ನಾರಾಯಣ ಗೌಡ ಅವರ ಮುಖಕ್ಕೆ ಮಸಿ ಬಳಿದಂತೆ ಆಗಿದೆ. ಕನ್ನಡದ ಬಗೆಗಿನ ಪ್ರೀತಿ , ಕಾಳಜಿ ಇದೇನಾ. ಐಟಿ ಬಿಟಿ ಕ್ಷೇತ್ರದಲ್ಲಿ ಕನ್ನಡ ಎಷ್ಟರ ಮಟ್ಟಿಗಿದೆ. ಅದನ್ನು ಪ್ರಶ್ನಿಸಲಿ'

'ಇದು ಉದ್ದೇಶಪೂರ್ವಕ ಹಲ್ಲೆ. ಮಿಂಟೋ ಆಸ್ಪತ್ರೆಯ ವೈದ್ಯರ ಮೇಲೆಯೇ ಹಲ್ಲೆ ಯಾಕೆ. ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಯಲ್ಲಿ ಈ ಹಲ್ಲೆ ಯಾಕೆ ನಡೆಸಿಲ್ಲ' ಎಂದೂ ರವೀಂದ್ರ ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.