ADVERTISEMENT

ಗ್ರಾಮಸಭೆಯಿಂದ ಹೊರ ನಡೆದ ಶಾಸಕ ಎಸ್‌.ಆರ್‌.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 17:24 IST
Last Updated 11 ನವೆಂಬರ್ 2024, 17:24 IST
ಎಸ್‌.ಆರ್‌.ವಿಶ್ವನಾಥ್
ಎಸ್‌.ಆರ್‌.ವಿಶ್ವನಾಥ್   

ಹೆಸರಘಟ್ಟ: ‘ಹೆಸರಘಟ್ಟ ಹುಲ್ಲುಗಾವಲು ಮೀಸಲು ಸಂರಕ್ಷಿತ ಪ್ರದೇಶ ಘೋಷಣೆ ಕುರಿತು ಇಲ್ಲಿನ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ತಾವು ಮಾತನಾಡುತ್ತಿದ್ದ ದೃಶ್ಯವನ್ನು ವೇದಿಕೆಯಲ್ಲಿದ್ದ ಸದಸ್ಯೆಯೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್, ಅರ್ಧದಲ್ಲೇ ಸಭೆಯಿಂದ ಹೊರ ನಡೆದರು.

ಸಭೆಯಲ್ಲಿ ಮಾತನಾಡುತ್ತಿದ್ದ ವಿಶ್ವನಾಥ್, ‘ಹೆಸರಘಟ್ಟ ಹುಲ್ಲುಗಾವಲನ್ನು ರಾಜ್ಯ ವನ್ಯಜೀವಿ ಮಂಡಳಿಯು ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸಿರುವುದರಿಂದ ಸುತ್ತಮುತ್ತಲಿನ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಬಿಡುವುದಿಲ್ಲ. ರೈತರು ತಮ್ಮ ಹಸುಗಳನ್ನು ಮೇಯಿಸಲು ಹುಲ್ಲುಗಾವಲಿಗೆ ಬಿಡುವಂತಿಲ್ಲ. ಪಕ್ಷಿ ಗೂಡಿನಲ್ಲಿ ಮೊಟ್ಟೆ ಇಟ್ಟಾಗ, ಅದನ್ನು ಕೆಳ ಬೀಳಿಸಿದರೆ ಅವರನ್ನೂ ಜೈಲಿಗೆ ಕಳಿಸುತ್ತಾರೆ’ ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್‌ ಸದಸ್ಯೆಯೊಬ್ಬರು ಶಾಸಕರು ಮಾತನಾಡುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ಇದನ್ನು ಗಮನಿಸಿದ ಶಾಸಕರು, ರೆಕಾರ್ಡ್ ಮಾಡುವುದನ್ನು ಸದಸ್ಯೆಗೆ ನಿಲ್ಲಿಸುವಂತೆ ಸೂಚಿಸಿ, ಆಕ್ರೋಶದಿಂದಲೇ ಸಭೆಯಿಂದ ಹೊರ ನಡೆದರು.

ADVERTISEMENT

ನಂತರ ಆರೋಪ– ಪ್ರತ್ಯಾರೋಪ ಗಲಾಟೆ ಗದ್ದಲಗಳಿಂದಲೇ ಗ್ರಾಮ ಸಭೆ ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.