ADVERTISEMENT

ದಕ್ಷಿಣ ಕನ್ನಡ, ಬಳ್ಳಾರಿಗೆ ಮೊಬೈಲ್ ಐಸಿಟಿಸಿ ವ್ಯಾನ್

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:46 IST
Last Updated 10 ಜುಲೈ 2024, 15:46 IST
ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳ ಏಡ್ಸ್‌ ಪ್ರತಿಬಂಧಕ ಘಟಕಗಳಿಗೆ ‘ಮೊಬೈಲ್‌ ಐಸಿಟಿಸಿ ವ್ಯಾನ್‌’ಗಳನ್ನು ಮತ್ತು ಎಲ್ಲ ಜಿಲ್ಲೆಗಳಿಗೆ ತಲಾ ಒಂದರಂತೆ ದ್ವಿಚಕ್ರವಾಹನಗಳನ್ನು ಬುಧವಾರ ವಿತರಿಸಲಾಯಿತು.
ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳ ಏಡ್ಸ್‌ ಪ್ರತಿಬಂಧಕ ಘಟಕಗಳಿಗೆ ‘ಮೊಬೈಲ್‌ ಐಸಿಟಿಸಿ ವ್ಯಾನ್‌’ಗಳನ್ನು ಮತ್ತು ಎಲ್ಲ ಜಿಲ್ಲೆಗಳಿಗೆ ತಲಾ ಒಂದರಂತೆ ದ್ವಿಚಕ್ರವಾಹನಗಳನ್ನು ಬುಧವಾರ ವಿತರಿಸಲಾಯಿತು.   

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳ ಏಡ್ಸ್‌ ಪ್ರತಿಬಂಧಕ ಘಟಕಗಳಿಗೆ ‘ಮೊಬೈಲ್‌ ಐಸಿಟಿಸಿ ವ್ಯಾನ್‌’ಗಳನ್ನು ಬುಧವಾರ ನೀಡಲಾಯಿತು. ಜೊತೆಗೆ ಎಲ್ಲ ಜಿಲ್ಲೆಗಳಿಗೆ ಒಂದರಂತೆ ದ್ವಿಚಕ್ರವಾಹನ ವಿತರಿಸಲಾಯಿತು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವಾಹನಗಳಿಗೆ ಚಾಲನೆ ನೀಡಿದರು. ಈ ವ್ಯಾನ್‌  ತಾತ್ಕಾಲಿಕ ಕ್ಲಿನಿಕ್‌ ಹೊಂದಿದ್ದು, ಎಚ್‌ಐವಿ ಪೀಡಿತರಿಗಾಗಿ ಬಳಕೆಯಾಗಲಿದೆ. ಐಸಿಟಿಸಿ ವ್ಯಾನ್‌ನಲ್ಲಿ ನಿಯಮಿತ ಆರೋಗ್ಯ ತಪಾಸಣೆ ನಡೆಸಬಹುದು. ಸಂತಾನೋತ್ಪತ್ತಿ ಸೋಂಕಿನ ಸಿಂಡ್ರೊಮಿಕ್ ಚಿಕಿತ್ಸೆ, ಪ್ರಸವಪೂರ್ವ ಆರೈಕೆಗೆ ಅವಶ್ಯವಿರುವ ಸೇವೆ ಒದಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ದುರ್ಗಮ ಪ್ರದೇಶಗಳಿಗೆ ಈ ವಾಹನ ತಲುಪಲಿದೆ. ಜೈಲು ಕೈದಿಗಳಿಗೂ ಐಸಿಟಿಸಿ ವ್ಯಾನ್‌ನಲ್ಲಿ ಚಿಕಿತ್ಸೆ ನೀಡಬಹುದು. ಎಚ್‌ಐವಿ/ಎಸ್‌ಟಿಐ ಹೆಪಟೈಟಿಸ್-ಬಿ ಮತ್ತು ಸಿ, ಟಿಬಿ ಸೋಂಕು ಹರಡುವ ಸಾಧ್ಯತೆ ಇರುವ ದುರ್ಬಲ ಪ್ರದೇಶಗಳಿಗೆ ಐಸಿಟಿಸಿ ವ್ಯಾನ್‌ ಸೇವೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.