ADVERTISEMENT

‘ಅಂಗವಿಕಲರಿಗೆ ಪ್ರತ್ಯೇಕ ವಿ.ವಿ ಸ್ಥಾಪಿಸಿ’

ಮೊಬಿಲಿಟಿ ಇಂಡಿಯಾ ಸಂಘಟನೆಯಿಂದ ಅಂಗವಿಕಲ ಸ್ನೇಹಿ ಪರಿಕರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:43 IST
Last Updated 2 ಆಗಸ್ಟ್ 2019, 19:43 IST
ಮೇಳದಲ್ಲಿ ವಿಶೇಷ ಪರಿಕರದ ಬಳಕೆಯ ಕುರಿತು ಮಾಹಿತಿ ಪಡೆದ ಜನರು– ಪ್ರಜಾವಾಣಿ ಚಿತ್ರ
ಮೇಳದಲ್ಲಿ ವಿಶೇಷ ಪರಿಕರದ ಬಳಕೆಯ ಕುರಿತು ಮಾಹಿತಿ ಪಡೆದ ಜನರು– ಪ್ರಜಾವಾಣಿ ಚಿತ್ರ   

ಬೆಂಗಳೂರು:‘ದೇಶದಲ್ಲಿ ವೃದ್ಧರ ಮತ್ತು ಅಂಗವಿಕಲರ ಸಂಖ್ಯೆ ಹೆಚ್ಚುತ್ತಿದೆ. ಈ ವಲಯದವರ ಆರೋಗ್ಯ ಮತ್ತು ಚಿಕಿತ್ಸೆಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಅಂಗವಿಕಲರಿಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು’ ಎಂದು ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಮಿತಿಯ (ಐಸಿಆರ್‌ಸಿ) ರಾಜಕೀಯ ಮತ್ತು ಸಂವಹನ ಸಲಹೆಗಾರ ಸುರಿಂದರ್‌ ಸಿಂಗ್‌ ಒಬೆರಾಯ್‌ ಸಲಹೆ ನೀಡಿದರು.

ಮೊಬಿಲಿಟಿ ಇಂಡಿಯಾ ಸಂಘಟನೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘2030ರ ವೇಳೆಗೆ ಎಲ್ಲರಿಗಾಗಿ ಸಹಾಯಕ ತಂತ್ರಜ್ಞಾನ’ ಕುರಿತು ಮಾತನಾಡಿದರು.

‘ಎಲ್ಲ ವಿಶ್ವವಿದ್ಯಾಲಯಗಳು, ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಅಂಗವಿಕಲರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಅವರಿಗಾಗಿಯೇ ವಿಶೇಷ ಕೋರ್ಸ್‌ ಪ್ರಾರಂಭಿಸಿ ಉದ್ಯೋಗಾವಕಾಶ ಸೃಷ್ಟಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶಾಸಕಿ ಸೌಮ್ಯಾ ರೆಡ್ಡಿ, ‘ಮೊಬಿಲಿಟಿ ಇಂಡಿಯಾ ಸಂಸ್ಥೆಯು ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದು ತಿಳಿಸದರು.

ಮೊಬಿಲಿಟಿ ಇಂಡಿಯಾದ ಸಂಸ್ಥೆಯ ಅಧ್ಯಕ್ಷ ಡಾ. ಚಾರ್ಲ್ಸ್ ಪ್ರಭಾಕರ್, ‘ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿರುವ ಅಧ್ಯಯನದಂತೆ, ವಿಶ್ವದಾದ್ಯಂತ 100 ಕೋಟಿ ಅಂಗವಿಕಲರಿಗೆ ನಾನಾ ಪರಿಕರಗಳನ್ನು ಒದಗಿಸುವ ಅವಶ್ಯವಿದೆ’ ಎಂದರು.

ಗಮನ ಸೆಳೆದ ಸಾಧನಗಳು: ಕೃತಕ ಕೈ–ಕಾಲು, ಮುಂಗೈ ಸೇರಿದಂತೆ ಹಲವು ಮಾದರಿ ಸಾಧನಗಳು ವಾಕ್‌ ಮತ್ತು ಶ್ರವಣ ದೋಷ ಹೊಂದಿದವರಿಗೆ ಆಧುನಿಕ ಪರಿಕರಗಳು ಪ್ರದರ್ಶನದಲ್ಲಿ ಲಭ್ಯ ಇದ್ದವು. ಆಧುನಿಕ ತಂತ್ರಜ್ಞಾನ ಆಧರಿತ ಈ ಪರಿಕರಗಳ ಬಳಕೆಯ ಕುರಿತು ಅಂಗವಿಕಲರು ಮಾಹಿತಿ ಪಡೆದುಕೊಂಡರು.

ನಿಮ್ಹಾನ್ಸ್‌ನ ಕನ್ವೆಷನ್‌ ಸೆಂಟರ್‌ನಲ್ಲಿ ಶನಿವಾರವೂ ಮೇಳ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.