ADVERTISEMENT

5 ವರ್ಷದಲ್ಲಿ 7 ಸಾವಿರ ಯುವಜನರಿಗೆ ಹೃದಯ ಚಿಕಿತ್ಸೆ: ಡಾ.ಸಿ.ಎನ್. ಮಂಜುನಾಥ್

ಹೃದಯ ಸಮಸ್ಯೆ ಹೆಚ್ಚಳ: ಡಾ.ಸಿ.ಎನ್. ಮಂಜುನಾಥ್ ಕಳವಳ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 21:33 IST
Last Updated 1 ನವೆಂಬರ್ 2022, 21:33 IST
ವಿವಿಧ ಲೇಖಕರ 10 ಕೃತಿಗಳನ್ನು ಡಾ.ಸಿ.ಎನ್. ಮಂಜುನಾಥ್ ಬಿಡುಗಡೆ ಮಾಡಿದರು. (ಎಡದಿಂದ) ಲೇಖಕರಾದ ರಾಘವ್, ನಾಗವೇಣಿ ಹೆಗಡೆ, ಮಂಜುನಾಥ್ ಚಾಂದ್, ನರೇಂದ್ರ ರೈ ದೇರ್ಲ, ರಂಗಕರ್ಮಿ ಮಂಡ್ಯ ರಮೇಶ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ವಿಜಯ ಕರ್ನಾಟಕ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ಲೇಖಕರಾದ ಸಂತೋಷಕುಮಾರ್ ಮೆಹೆಂದಳೆ, ರಾಜೀವ ನಾರಾಯಣ ನಾಯಕ, ವಾಸುದೇವ ಶೆಟ್ಟಿ, ರಂಗಸ್ವಾಮಿ ಮೂಕನಹಳ್ಳಿ, ಬರಹಗಾರ್ತಿ ಕುಸುಮಾ ಆಯರಹಳ್ಳಿ ಹಾಗೂ ಶುಭಶ್ರೀ ಭಟ್ಟ ಇದ್ದಾರೆ.

ಬೆಂಗಳೂರು: ‘ಹೃದಯ ಸಮಸ್ಯೆಗೆ ಸಂಬಂಧಿಸಿದಂತೆ 5 ವರ್ಷಗಳಲ್ಲಿ 7 ಸಾವಿರ ಯುವಜನರಿಗೆ ಚಿಕಿತ್ಸೆ ನೀಡ ಲಾಗಿದೆ. ಯಾವುದೇ ಸಮಸ್ಯೆ ಇಲ್ಲದ ಆರೋಗ್ಯವಂತರಿಗೂ ಹೃದಯಾಘಾತ ಆಗುತ್ತಿದೆ. ಆದ್ದರಿಂದ ಹೊಸ ಕಾರಣ ಪತ್ತೆಗೆ ಅಧ್ಯಯನ ನಡೆಸುತ್ತಿ
ದ್ದೇವೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ವೀರಲೋಕ ಪ್ರಕಾಶನವು ನಗರ ದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ 10 ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ಬದಲಾದ ಜೀವನ ಶೈಲಿ, ಧೂಮಪಾನ, ಮದ್ಯಪಾನದಂತಹ ವ್ಯಸನ ಸೇರಿ ವಿವಿಧ ಕಾರಣಗಳಿಂದ 50 ವರ್ಷದೊಳಗಿನವರೂ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ.15 ವರ್ಷದ ಬಾಲಕ, 19 ವರ್ಷದ ಯುವಕನಿಗೂ ಹೃದಯಾಘಾತಕ್ಕೆ ಚಿಕಿತ್ಸೆ ನೀಡಲಾಗಿದೆ. ಇದು ಆತಂಕಕಾರಿ ಸಂಗತಿಯೂ ಆಗಿದೆ.ಹೃದಯವನ್ನು ಔಷಧಗಳಿಂದ ಕಾಪಾಡಿ ಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.

ಮಹಿಳೆಯರಲ್ಲೂ ಸಮಸ್ಯೆ ಹೆಚ್ಚಳ:‘ಮಹಿಳೆಯರಲ್ಲೂ ಹೃದಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮಾನಸಿಕ ಒತ್ತಡವೇ ಮುಖ್ಯ ಕಾರಣ.ಮಕ್ಕಳ ವಿದ್ಯಾಭ್ಯಾಸ ತಾಯಂದಿರ ಪರೀಕ್ಷೆ ಆಗಿದೆ. ಯುವಕರ ಅತಿಯಾಸೆಯಿಂದ ಒತ್ತಡಕ್ಕೆ ಒಳಗಾಗಿ, ಸಮಸ್ಯೆ ತಂದುಕೊಳ್ಳುತ್ತಿದ್ದಾರೆ’ ಎಂದು ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ADVERTISEMENT

ಲೇಖಕ ನರೇಂದ್ರ ರೈ ದೇರ್ಲ, ‘ಹಣದ ಹಸಿವಿನಿಂದ ಜನರು ನಗರಕ್ಕೆ ವಲಸೆ ಬರುತ್ತಿದ್ದಾರೆ. ಆದರೆ, ನಿಜವಾದ ಹಸಿವು ಕೃಷಿಯಿಂದ ನೀಗಲಿದೆ.ನಾನು ಮೂಲತಃ ಕೃಷಿಕ. ಕೃತಿಯಲ್ಲಿ ಕೃಷಿ ಮಹತ್ವ ಸಾರಲಾಗಿದೆ’ ಎಂದರು.

ವೀರಲೋಕ ಬುಕ್ಸ್‌ನವಿರಕಪುತ್ರ ಶ್ರೀನಿವಾಸ್, ‘ಪುಸ್ತಕ ಪ್ರಕಾಶನದ ನಮ್ಮ ಹೊಸ ಪ್ರಯತ್ನವನ್ನು ಕೆಲವರು ಸ್ವಾಗತಿಸಿದರೆ, ಕೆಲವರಲ್ಲಿ ಅಸಹನೆ ಯನ್ನೂ ಉಂಟು ಮಾಡಿದೆ.ಸಾಹಿತ್ಯ ಲೋಕ ಅಸಹನೆ ಪ್ರದರ್ಶನಕ್ಕೆ ಇಳಿಯ ಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.