ಬೆಂಗಳೂರು: ಸಂಸದ ಪಿ.ಸಿ. ಮೋಹನ್ ಅವರು ಬುಧವಾರ ಮೆಟ್ರೊ ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಕಬ್ಬನ್‌ಪಾರ್ಕ್‌ವರೆಗೆ ಪ್ರಯಾಣಿಸಿ ಪರಿಶೀಲಿಸಿದರು.
ಕಾಡುಗೋಡಿಯಿಂದ ಚಲ್ಲಘಟ್ಟಕ್ಕೆ 43 ಕಿ.ಮೀ. ದೂರವಿದೆ. ಬಸ್‌ನಲ್ಲಿ ಪ್ರಯಾಣಿಸಲು ಕನಿಷ್ಠ 2 ತಾಸು ಬೇಕಾಗುತ್ತದೆ. ಮೆಟ್ರೊದಲ್ಲಿ ಕೇವಲ ₹ 60 ವೆಚ್ಚದಲ್ಲಿ 1 ಗಂಟೆ 20 ನಿಮಿಷಗಳಲ್ಲಿ ತಲುಪಬಹುದು. ಇದರಿಂದ ವಾಹನ ದಟ್ಟಣೆ ಕೂಡ ಕಡಿಮೆಯಾಗಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ವಿಐಪಿ ಸಮಾರಂಭಗಳನ್ನು ಬದಿಗೆ ಸರಿಸಿ ತಕ್ಷಣ ಮೆಟ್ರೊ ವಿಸ್ತರಿತ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಲು ಸೂಚನೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಹಿತಾಸಕ್ತಿಯ ಬದ್ಧತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.
ಮೆಟ್ರೊ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ನಿತ್ಯ 6.2 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಈಗ ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲು ಸೇವೆ ಆರಂಭವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ 6.8 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.