ADVERTISEMENT

ಬಿಎಂಟಿಸಿಗೆ ಎಂಟಿಸಿಎಲ್‌ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 23:22 IST
Last Updated 20 ಜುಲೈ 2024, 23:22 IST
BMTC bus
BMTC bus   

ಬೆಂಗಳೂರು: ತಮಿಳುನಾಡಿನ ‘ಸಾರಿಗೆ ಸಂಸ್ಥೆ ಎಂಟಿಸಿ (ಚೆನ್ನೈ) ಲಿಮಿಟೆಡ್‌’ ಅಧಿಕಾರಿಗಳು ಬಿಎಂಟಿಸಿಗೆ ಅಧ್ಯಯನ ಭೇಟಿ ನೀಡಿದರು.

ಬಿಎಂಟಿಸಿಯಲ್ಲಿ ಅಳವಡಿಸಿ ಕೊಂಡಿರುವ ಮಾದರಿ ಉಪಕ್ರಮಗಳು, ಸಂಸ್ಥೆಯ ಇತಿಹಾಸ, ಶಕ್ತಿ ಯೋಜನೆಯ ಅನುಷ್ಠಾನ, ಪ್ರಯಾಣಿಕರ ಪಾಸ್ ವ್ಯವಸ್ಥೆ, ಆರ್ಥಿಕ ಕಾರ್ಯಕ್ಷಮತೆ, ಸಂಚಾರ ಆದಾಯ, ಸಂಸ್ಥೆಯ ಬಸ್ ವೇಳಾಪಟ್ಟಿ, ಕಾರ್ಯಾಚರಣೆಗಳ ವೆಚ್ಚ, ಜಿಸಿಸಿ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಹಸಿರು ತಂತ್ರಜ್ಞಾನದ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು. 

ಎಂಟಿಸಿ (ಚೆನ್ನೈ) ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಆಲ್ಬಿ ಜಾನ್ ವರ್ಗೀಸ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಗುಣಸೇಖರನ್ ಮತ್ತು ಅಧಿಕಾರಿಗಳಿಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್‌ ಆರ್. ಅವರು ಪ್ರಾತ್ಯಕ್ಷಿಕೆ ಮೂಲಕ ವಿವರ ನೀಡಿದರು.

ADVERTISEMENT

ಅಧ್ಯಯನ ತಂಡದ ಅಧಿಕಾರಿಗಳು ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ಶಾಖೆಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದರು.

ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಆಚರಣೆ) ಜಿ.ಟಿ. ಪ್ರಭಾಕರ ರೆಡ್ಡಿ, ಮುಖ್ಯ ತಾಂತ್ರಿಕ ಎಂಜಿನಿಯರ್‌ ಎ.ಎನ್. ಗಜೇಂದ್ರ ಕುಮಾರ್, ಮುಖ್ಯ ಗಣಕ ವ್ಯವಸ್ಥಾಪಕ ಕೆ.ಜಿ.ಸದಾನಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.