ನೆಲಮಂಗಲ: ‘ಭ್ರಷ್ಟಾಚಾರ ಮುಕ್ತ ಶಿಷ್ಟಾಚಾರದ ಜೀವನಕ್ಕೆ ಗುಣಮಟ್ಟದ ಶಿಕ್ಷಣ ನೀಡುವುದು ಆಮ್ ಆದ್ಮಿ ಪಕ್ಷದ ಗುರಿಯಾಗಿದೆ’ ಎಂದು ಪಕ್ಷದ ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ತಿಳಿಸಿದರು.
ಪಟ್ಟಣದ ವೀರಾಂಜನೇಯ ದೇವಾಲಯದ ಬಳಿಯ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ತಾಲ್ಲೂಕಿನ ಉಚಿತ ಆರೋಗ್ಯ ಸೇವಾ ಕೇಂದ್ರ ಮತ್ತು ಜನಜಾಗೃತಿ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಜನಜಾಗೃತಿ, ದೇಶದ ಅಭಿವೃದ್ಧಿ ಹಾಗೂ ರೈತರ ಋಣ ತೀರಿಸುವುದು ಪಕ್ಷದ ಧ್ಯೇಯವಾಗಿದೆ. ಕೆಲವು ಅಪ್ರಾಮಾಣಿಕ ಪಕ್ಷಗಳು ದೇಶ ಕಡೆಗಣಿಸಿ ಪಕ್ಷ ಬೆಳವಣಿಗೆಗೆ ಮಾತ್ರ ಸೀಮಿತವಾಗಿವೆ ಎಂದು ದೂರಿದರು.
ಸಂಘಟನಾ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಮಾತನಾಡಿ, ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದ್ದು, ಭ್ರಷ್ಟ ವ್ಯವಸ್ಥೆ ತಾಂಡವವಾಡುತ್ತಿದೆ. ಸಂವಿಧಾನ ಮರುಸ್ಥಾಪನೆಗೆ ಆಮ್ ಆದ್ಮಿ ಪಕ್ಷದ ಹೋರಾಟ ಎಂದರು.
ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ್ ರಾಠೋಡ್, ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್.ಬಿ.ಹನುಮಾಪುರ, ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣಯ್ಯ, ಪದಾಧಿಕಾರಿಗಳಾದ ಮೋನೇಶ್ ನಾಡಗೌಡ, ಮುಕುಂದ, ಲಕ್ಷ್ಮಯ್ಯ, ಸೋಮಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.