ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಮಹೇಶ್ ಬಾಬು ಎಂಬುವರನ್ನು ಕೊಲೆ ಮಾಡಿದ್ದ, ಅವರ 9 ಸ್ನೇಹಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 64ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಸ್ತೂರ್ ಬಾ ನಗರದ ನಿವಾಸಿಗಳಾದ ಪಾಂಡುರಂಗ ಅಲಿಯಾಸ್ ಪಾಂಡು (38), ಲಿಂಗರಾಜು (42), ಪ್ರಕಾಶ್ (38), ಪ್ರದೀಪ್ ಕುಮಾರ್ ಅಲಿಯಾಸ್ ಪಾಣಿ (33), ವೆಂಕಟೇಶ್, ಮೋಹನ್ ಅಲಿಯಾಸ್ ಕುಂಟ, ಕಿರಣ ಅಲಿಯಾಸ್ ಗುಂಗಾ, ಶ್ರೀನಿವಾಸ್ ಹಾಗೂ ಗಿರೀಶ್ ಶಿಕ್ಷೆಗೆ ಗುರಿಯಾದವರು.
ಸ್ನೇಹಿತರೆಲ್ಲ ಮೇಕೆದಾಟು ಪ್ರವಾಸ ಹೋಗಿದ್ದರು. ಅದೇ ವೇಳೆ ಮಹೇಶ್ ಹಾಗೂ ಲಿಂಗರಾಜು ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿತ್ತು. ಅದೇ ವೈಷಮ್ಯದಿಂದ ಲಿಂಗರಾಜು, ತನ್ನ ಸಹಚರರ ಜೊತೆ ಸೇರಿ 2003ರ ಜುಲೈ 7ರಂದು ಮಹೇಶ್‌ಬಾಬು ಅವರನ್ನು ಕೊಲೆ ಮಾಡಿದ್ದ. ಆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದ ಬ್ಯಾಟರಾಯನಪುರ ಇನ್‌ಸ್ಪೆಕ್ಟರ್ ಎನ್.ಹನುಮಂತಪ್ಪ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ರಾಜೇಶ್ವರ್ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ನಾಗರಾಜ್ ರೆಡ್ಡಿ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.