ನೆಲಮಂಗಲ: ‘ಕನ್ನಡದಲ್ಲಿ ಮಾತನಾಡುವುದು ಕೀಳರಿಮೆ ಆಗಬಾರದು. ಇತಿಹಾಸವಿರುವ ಕನ್ನಡ ನಮ್ಮ ಮೊದಲ ಆದ್ಯತೆ ಆಗಬೇಕು’ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಹೊಯ್ಸಳ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ‘ಕಲಾ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅನಂತ ಅವಕಾಶಗಳಿವೆ. ಪದವಿ ಪೂರ್ವದ ಹಂತ ಕನಸುಗಳ ಮುನ್ನುಡಿ. ಜೀವನ ರಂಗಮಂದಿರವಿದ್ದಂತೆ. ಒಂದೇ ಪ್ರವೇಶ, ಒಂದೇ ನಿರ್ಗಮನ ಜಾಗೃತರಾಗಿ ಹೆಜ್ಜೆ ಇಡಬೇಕು ಎಂದರು.
ಕಾಲೇಜಿನ ಅಧ್ಯಕ್ಷ ಡಾ.ಟಿ.ರಾಮಕೃಷ್ಣ ಯುಗಾದಿ ಸಂದರ್ಭದಲ್ಲಿ ನಾಗತಿಹಳ್ಳಿಯಲ್ಲಿ ಅಯೋಜಿಸುವ ‘ಸಾಂಸ್ಕೃತಿಕ ಹಬ್ಬ’ದಲ್ಲಿ ಕಾಲೇಜಿನ ಒಂದು ತಂಡಕ್ಕೆ ಪ್ರದರ್ಶನದ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಾಂಶುಪಾಲ ಕೆ.ವಿ.ಗೌರಿಶಂಕರ್ ಎಷ್ಟೇ ಎತ್ತರಕ್ಕೆ ಬೆಳೆದರೂ ಬೇರುಗಳನ್ನು ಬಿಡಬೇಡಿ ಎಂದರು.
ಉಪ ಪ್ರಾಂಶುಪಾಲ ಎಚ್.ಆರ್.ಗೋಪಾಲ ಓದಿನ ಜೊತೆಗೆ ಕಲೆಯನ್ನು ಬೆಳೆಸಿಕೊಳ್ಳಿ ಎಂದರು.
ಕಾಲೇಜು ಸಮಿತಿಯ ಬಿ.ವಿ.ಸುರೇಶ್, ಎಸ್.ಜ್ಯೋತಿ, ಅನ್ನಪೂರ್ಣ, ಎಂ.ಎಸ್.ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.