ADVERTISEMENT

‘ಮೆಟ್ರೊ’ ಹಸಿರು ಮಾರ್ಗ ಮತ್ತೆರಡು 6 ಬೋಗಿ ರೈಲು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 22:01 IST
Last Updated 28 ಡಿಸೆಂಬರ್ 2019, 22:01 IST
   

ಬೆಂಗಳೂರು:‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ ಮೂರು ಬೋಗಿಗಳ ಮತ್ತೆರಡು ರೈಲುಗಳನ್ನು ಆರು ಬೋಗಿ ರೈಲುಗಳನ್ನಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು ಪರಿವರ್ತಿಸಿದೆ. ಇದೇ 30ರಿಂದ ಈ ರೈಲುಗಳು ಸಂಚಾರ ಆರಂಭಿಸಲಿವೆ.

ಈ ಮಾರ್ಗದಲ್ಲಿ ಇದರಿಂದಾಗಿ ಆರು ಬೋಗಿ ರೈಲುಗಳ ಸಂಖ್ಯೆ 14ಕ್ಕೆ ಏರಲಿದೆ. ಈ ಆರು ಬೋಗಿಗಳ ರೈಲುಗಳು ದಿನದಲ್ಲಿ ಒಟ್ಟು 106 ಬಾರಿ (ಭಾನುವಾರ ಹೊರತುಪಡಿಸಿ) ಸಂಚರಿಸಲಿವೆ.

ದಟ್ಟಣೆ ಸಮಯದಲ್ಲಿ ಶೇ 77ರಷ್ಟು ಆರು ಬೋಗಿಗಳು, ಶೇ 23ರಷ್ಟು ಮೂರು ಬೋಗಿಗಳ ರೈಲುಗಳು ಸಂಚರಿಸಲಿವೆ ಎಂದು ನಿಗಮ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.