ಬೆಂಗಳೂರು: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವ ಜನರಿಗೆ ಮೆಟ್ರೊ ರೈಲು ನಿಗಮ ವಾರಾಂತ್ಯದ ಆಫರ್ ನೀಡಿದೆ. ಲಾಲ್‌ಬಾಗ್ ನಿಲ್ದಾಣದಿಂದ ಯಾವುದೇ ಮೂಲೆಗೆ ಸಂಚರಿಸಿದರೂ ಪ್ರಯಾಣ ದರ ₹30 ನಿಗದಿ ಮಾಡಿದೆ.
ಶನಿವಾರದಿಂದ ಸೋಮವಾರದ(ಆ.13–ಆ.15) ತನಕ ಮೂರು ದಿನ ಈ ರಿಯಾಯಿತಿ ದೊರೆಯಲಿದೆ. ಇದಕ್ಕಾಗಿ ಪೇಪರ್ ಟಿಕೆಟ್‌ಗಳನ್ನು ಪರಿಚಯಿಸಲಾಗಿದ್ದು, ಎಲ್ಲಾ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಲಭ್ಯ ಇರಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಬೆಳಿಗ್ಗೆ 8ರಿಂದ ಸಂಜೆ 6 ಗಂಟೆ ತನಕ ಪೇಪರ್ ಟಿಕೆಟ್‌ಗಳು ಲಭ್ಯವಾಗಲಿವೆ. ಲಾಲ್‌ಬಾಗ್ ನಿಲ್ದಾಣದಲ್ಲಿ ಮಾತ್ರ ರಾತ್ರಿ 8ರ ತನಕ ಟಿಕೆಟ್ ದೊರಕಲಿವೆ. ಈ ಟಿಕೆಟ್‌ಗಳನ್ನು ಬೆಳಿಗ್ಗೆ 10ರಿಂದ ರಾತ್ರಿ 8ರ ತನಕ ಬಳಕೆ ಮಾಡಲು ಅವಕಾಶ ಇದೆ ಎಂದು ವಿವರಿಸಿದೆ.
‘ಯಾವುದೇ ನಿಲ್ದಾಣದಿಂದ ಲಾಲ್‌ಬಾಗ್‌ಗೆ ತೆರಳಲು ಪೇಪರ್ ಟಿಕೆಟ್ ಬಳಸಲು ಸಾಧ್ಯವಿಲ್ಲ. ಚಾಲ್ತಿಯಲ್ಲಿರುವ ಟೋಕನ್ ಅಥವಾ ಸ್ಮಾರ್ಟ್‌ಕಾರ್ಡ್ ಬಳಸಬಹುದು. ಲಾಲ್‌ಬಾಗ್‌ನಿಂದ ಹಿಂತಿರುಗುವ ಪ್ರಯಾಣಿಕರು ಮಾತ್ರ ಪೇಪರ್ ಟಿಕೆಟ್ ಬಳಸಬಹುದು’ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.