ಬೆಂಗಳೂರು: ನಗರದ ಸಾರಿಗೆ ಸಂಪರ್ಕ ಜಾಲವಾದ ‘ನಮ್ಮ ಮೆಟ್ರೊ’ಗೆ ನಮ್ಮತನ ಇರಲೆಂದೇ ಆ ಹೆಸರು ಇಡಲಾಗಿದೆ. ಪ್ರತಿ ಪ್ರಯಾಣಿಕನ ಮನದಲ್ಲಿಯೂ ಈ ಸಾರಿಗೆ ನನ್ನದು ಎಂಬ ಭಾವ ಬರುತ್ತದೆ. ಇಂತಹ ಸ್ವಂತಿಕೆಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕಾಗಿದೆ ಎಂದು ಅಖಿಲ ಭಾರತ ಬಂಜಾರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಮಾ ನಾಯ್ಕ್ ಹೇಳಿದ್ದಾರೆ.
ರಾಮ ನಾಯ್ಕ್ ಅವರು ಬೆಂಗಳೂರು ಮೆಟ್ರೊ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆಗಿದ್ದರು.
‘ನಮ್ಮ ಮೆಟ್ರೊ’ಗೆ ಜಗಜ್ಯೋತಿ ಬಸವೇಶ್ವರರ ಹೆಸರಿಡಬೇಕು ಎಂಬ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಬೇಡಿಕೆಗೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘ನಮ್ಮ ಮೆಟ್ರೊಗೆ ಮಹಾಪುರುಷರ ಹೆಸರನ್ನಿಡಬೇಕು ಎಂದು ಆಗಾಗ ಹಲವರಿಂದ ಒತ್ತಾಯ ಕೇಳಿ ಬರುತ್ತದೆ. ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು, ಸಮಾಜ ಸುಧಾರಕರನ್ನು ಸ್ಮರಿಸಬೇಕಾದುದು ನಮ್ಮ ಆದ್ಯ ಕರ್ತವ್ಯ. ಜೊತೆಗೆ ಸಾಮಾನ್ಯ ನಾಗರಿಕರನ್ನು ಗೌರವಿಸುವುದೂ ಮುಖ್ಯವಾಗುತ್ತದೆ. ಇದನ್ನು ಯೋಚಿಸಿಯೇ ಮೆಟ್ರೊ ಸಾರಿಗೆಗೆ ನಮ್ಮ ಮೆಟ್ರೊ ಎಂದು ಹೆಸರಿಡಲಾಗಿದೆ.
‘ಬಿಎಂಆರ್‌ಸಿಎಲ್‌ಗೆ ಈ ನೆಲದ ವೈಶಿಷ್ಟ್ಯ ಬಿಂಬಿಸುವ ರಂಗೋಲಿ ಲಾಂಛನವನ್ನುಅಳವಡಿಸಲಾಗಿದೆ. ಶೇ 90ರಷ್ಟು ಸಾಮಾನ್ಯ ಜನರೇ ಸಂಚರಿಸುವ ಮೆಟ್ರೊ ರೈಲಿಗೆ ಈ ಹೆಸರೇ ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.