ಬೆಂಗಳೂರು: ಹೆಬ್ಬಗೋಡಿ ಮೆಟ್ರೊ ಡಿಪೊಗೆ ಬಂದಿದ್ದ ಚಾಲಕ ರಹಿತ ಎಂಜಿನ್ ಅಳವಡಿಸಿರುವ ಎರಡು ಬೋಗಿಗಳೂ ಸೇರಿದಂತೆ ಒಟ್ಟು ಆರು ಬೋಗಿಗಳನ್ನು ಶುಕ್ರವಾರ ಹಳಿಗಳ ಮೇಲೆ ಯಶಸ್ವಿಯಾಗಿ ಇಳಿಸಲಾಯಿತು.
‘ನಮ್ಮ ಮೆಟ್ರೊ’ ಹಳದಿ ಮಾರ್ಗದ ಸಂಚಾರಕ್ಕಾಗಿ ಚೀನಾದಿಂದ ತರಲಾದ ಚಾಲಕರಹಿತ ಮೆಟ್ರೊ ರೈಲಿನ ಒಂದು ಸೆಟ್ ಬೋಗಿಗಳು ಹೆಬ್ಬಗೋಡಿ ಡಿಪೊಗೆ ಬುಧವಾರ ತಲುಪಿದ್ದವು. ಶುಕ್ರವಾರ ಕ್ರೇನ್ ಮೂಲಕ ಇಳಿಸಿ ಹಳಿ ಮೇಲೆ ಕೂರಿಸಲಾಯಿತು.
ಮೆಟ್ರೊ ಹಳದಿ ಮಾರ್ಗದ ಆರ್.ವಿ ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರ ವರೆಗಿನ ನೂತನ ಮಾರ್ಗದಲ್ಲಿ ಚಾಲಕರಹಿತ ಎಂಜಿನ್ ಇರುವ ಮೆಟ್ರೊ ರೈಲುಗಳು ಸಂಚರಿಸಲಿವೆ. 6 ಬೋಗಿಗಳ ಜೋಡಣೆಯಾದ ಮೇಲೆ ಈ ಮಾರ್ಗದಲ್ಲಿ ವಿವಿಧ ಪರೀಕ್ಷೆ ಮತ್ತು ಪರಿಶೀಲನೆಗಳು ಆರಂಭಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.