ADVERTISEMENT

ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿತಪ್ಪಿದ ರೀ ರೈಲ್‌! ಸಂಚಾರ ಭಾರಿ ವ್ಯತ್ಯಯ

ಪ್ರಯಾಣಿಕರ ಪರದಾಟ, ರೀ ರೈಲು ಹಳಿಗೆ ತರಲು‌‌ ಹರಸಾಹಸ: ಇಂದು ಮಧ್ಯಾಹ್ನದವರೆಗೂ ಸಮಸ್ಯೆ ಸಂಭವ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 3:00 IST
Last Updated 3 ಅಕ್ಟೋಬರ್ 2023, 3:00 IST
<div class="paragraphs"><p>ನಮ್ಮ ಮೆಟ್ರೊ ಹಸಿರು ಮಾರ್ಗ</p></div>

ನಮ್ಮ ಮೆಟ್ರೊ ಹಸಿರು ಮಾರ್ಗ

   

ಬೆಂಗಳೂರು: ಮಂಗಳವಾರ ನಸುಕಿನ ಜಾವ ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ರೀ ರೈಲು ಹಳಿ ತಪ್ಪಿದ್ದು‌, ಈ‌ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ ಉಂಟಾಗಿದೆ.

ರಾಜಾಜಿನಗರದ ಮೆಟ್ರೊ‌ ನಿಲ್ದಾಣದ ಸಮೀಪ‌ ಹಳಿ ತಪ್ಪಿದ ಪರಿಣಾಮ, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆಯೇ ಕೆಲಸಕ್ಕೆ ತೆರಳುವವರಿಗೆ ತೊಂದರೆ‌ಯಾಗಿದೆ.

ADVERTISEMENT

ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ರೀ ರೈಲ್‌ ಬಳಸಲಾಗುತ್ತದೆ. ಸೋಮವಾರ ಮಧ್ಯರಾತ್ರಿ ಸಂಚರಿಸುತ್ತಿದ್ದಾಗ ರೀ ರೈಲು ಹಳಿ ತಪ್ಪಿದೆ.

ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಟ್ರ್ಯಾಕ್ ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ.

ರೀ ರೈಲ್‌ ಅನ್ನು ಹಳಿಗೆ ತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.‌ ಮಧ್ಯಾಹ್ನದ ವರೆಗೂ ಇದೇ ಸ್ಥಿತಿ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ತನಕ ಮಾತ್ರ ಮೆಟ್ರೊ ಸಂಚರಿಸುತ್ತಿವೆ. ಅಲ್ಲೂ ನಿಗದಿತ ಸಮಯಕ್ಕೆ ಮೆಟ್ರೊ ‌ಸಂಚಾರ ನಡೆಸುತ್ತಿಲ್ಲ.

ಇನ್ನು ಮಂತ್ರಿ ಸ್ಕ್ವೇರ್‌ನಿಂದ ಯಶವಂತಪುರ ತನಕ ಒಂದು ಮಾರ್ಗದಲ್ಲಿ ಅರ್ಧ ತಾಸಿಗೆ ಒಂದು ಮೆಟ್ರೊ ಸಂಚರಿಸುತ್ತಿದ್ದು ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.