ಜ.27:ಶ್ರೀರಾಂಪುರ ಮೆಟ್ರೊ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ರಸ್ತೆಗೆ ಬಿದ್ದು ಒಂದೂವರೆ ವರ್ಷದ ಮಗು ಹಾಸಿನಿ ಸಾವು.
ಜ.28: ‘ನಮ್ಮ ಮೆಟ್ರೊ’ದ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಮೊದಲ ಬಾರಿಗೆ ಆರು ಬೋಗಿಗಳ ಮೆಟ್ರೊ ರೈಲು ಸಂಚಾರಕ್ಕೆ ಸಂಪಿಗೆ ರೋಡ್ ನಿಲ್ದಾಣದಲ್ಲಿ ಚಾಲನೆ.
ಮೇ 5:ಮೆಜೆಸ್ಟಿಕ್‌ನ ಮೆಟ್ರೊ ನಿಲ್ದಾಣಕ್ಕೆ ಬಂದ ವ್ಯಕ್ತಿ ತಪಾಸಣೆಗೆ ಒಳಪಡಲು ನಿರಾಕರಿಸಿದ್ದರಿಂದ ಗೊಂದಲ ಸೃಷ್ಟಿ. ಈ ಅನುಮಾನಕ್ಕೆ ಕಾರಣರಾದ ಸಾಜಿದ್ ಖಾನ್ ಅಮಾಯಕರು ಎಂದು ತಿಳಿಸಿದ ಪೊಲೀಸರು.
ಜೂನ್ 6:ಗೊಟ್ಟಿಗೆರೆ– ನಾಗವಾರ ಮಾರ್ಗದ ಕಾಮಗಾರಿಗೆ ₹ 2,318 ಕೋಟಿ ಬಂಡವಾಳ ಹೂಡುವ ಬಗ್ಗೆ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಮತ್ತು ಬಿಎಂಆರ್‌ಸಿಎಲ್ ಜೊತೆ ಒಪ್ಪಂದ.
ಸೆ.30:ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಮೆಟ್ರೊ ಸೀಲಿಂಗ್ ಕುಸಿತ. ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾದ ನಾಲ್ವರು ಪ್ರಯಾಣಿಕರು.
ಅ.15: ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವಹಿವಾಟು ವಿವರ ಪ್ರಕಟ. ಈ ಅವಧಿಯಲ್ಲಿ ‘ನಮ್ಮ ಮೆಟ್ರೊ’ವಾಣಿಜ್ಯ ಸಂಚಾರದಲ್ಲಿ ಶೇ 26ರಷ್ಟು ಪ್ರಗತಿ
ಅ.25: ದೀಪಾವಳಿ ಸಂದರ್ಭದಲ್ಲಿ ದಾಖಲೆಯ 4.83 ಲಕ್ಷ ಜನರಿಂದ ಮೆಟ್ರೊ ರೈಲಿನಲ್ಲಿ ಪ್ರಯಾಣ. ನಿಗಮಕ್ಕೆ ₹1.12ಕೋಟಿ ವರಮಾನ.
ನ.7: ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ವೇಳೆ ಅವಘಡ. ಕಾರ್ಮಿಕ, ಒಡಿಶಾದ ಸಮೀರ್ ಕಾಂತೋ ಸೇನಾಪತಿ ಸಾವು.
ನ.7: ಎರಡನೇ ಹಂತದಲ್ಲಿಗೊಟ್ಟಿಗೆರೆ–ನಾಗವಾರ ಸುರಂಗ ಮಾರ್ಗದ (ಲೇನ್ 6) ಪ್ಯಾಕೇಜ್–1 ಮತ್ತು ಪ್ಯಾಕೇಜ್– 4ರ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಸಂಸ್ಥೆಗಳಿಗೆ ಅಂಗೀಕಾರ ಪತ್ರ.
ಡಿ.3: ರಾತ್ರಿ 10ರ ನಂತರ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಪ್ರತಿ ರೈಲಿನಲ್ಲಿ ಮಹಿಳಾ ಭದ್ರತಾ ನಿಯೋಜನೆ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿ.
ಡಿ.10: 2020ರ ಜನವರಿ 1ರಿಂದ ರಾತ್ರಿ 12ರವರೆಗೆ ಮೆಟ್ರೊ ರೈಲು ಸಂಚಾರ ಸೇವೆ ನೀಡುವ ಭರವಸೆ ನೀಡಿದ ನಿಗಮ.
ಡಿ. 21:ಕೆ.ಆರ್. ಪುರ–ಸೆಂಟ್ರಲ್ ಸಿಲ್ಕ್‌ಬೋರ್ಡ್ ಜಂಕ್ಷನ್ ನಡುವೆ 17 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನ.ಅರ್ಜಿ ಸಲ್ಲಿಕೆಗೆ 2020ರ ಫೆ.6ರವರೆಗೆ ಕಾಲಾವಕಾಶ. ಟೆಂಡರ್ ಪಡೆದ ದಿನದಿಂದ 27 ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಗಿಸುವಂತೆ ಷರತ್ತು.
ಡಿ.22: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣಗೊಳ್ಳುತ್ತಿರುವ 37 ನಿಲ್ದಾಣಗಳ ಹೆಸರು ಬದಲು.
ಡಿ.28: ಹಸಿರು ಮಾರ್ಗದಲ್ಲಿ ಮೂರು ಬೋಗಿಗಳ ಮತ್ತೆರಡು ರೈಲುಗಳು ಆರು ಬೋಗಿಗಳಾಗಿ ಪರಿವರ್ತನೆ. ಆರು ಬೋಗಿಗಳ ಸಂಖ್ಯೆ 14ಕ್ಕೆ ಏರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.