ADVERTISEMENT

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:22 IST
Last Updated 6 ಜುಲೈ 2018, 19:22 IST
ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಲಾಯಿತು
ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಲಾಯಿತು   

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ವತಿಯಿಂದ ನಗರದಲ್ಲಿ 15 ದಿನಗಳು ನಂದಿನಿ ಸಿಹಿ ಉತ್ಸವ ಆಚರಿಸಲಾಗುತ್ತದೆ. ಶುಕ್ರವಾರ ಆರಂಭವಾಗಿರುವ ಉತ್ಸವ ಜುಲೈ 20ರವರೆಗೆ ಮುಂದುವರಿಯಲಿದೆ.

ಮೈಸೂರು ಪಾಕ್‌, ‍ಪೇಡಾ, ಬಾದಾಮಿ ಬರ್ಫಿ, ಗೋಡಂಬಿ ಬರ್ಫಿ, ಕೇಸರ್‌ ಪೇಡಾ, ಚಾಕೋಲೆಟ್‌ ಬರ್ಫಿ, ಜಾಮೂನ್, ರಸಗುಲ್ಲಾ ಸೇರಿದಂತೆ ವಿವಿಧ ರೀತಿಯ ಸಿಹಿ ತಿನಿಸುಗಳು ಮಾರುಕಟ್ಟೆಯಲ್ಲಿ ಸಿಗಲಿವೆ. ನಂದಿನಿ ಪಾರ್ಲರ್‌ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಗ್ರಾಹಕರು ಕೊಂಡುಕೊಳ್ಳಬಹುದು ಎಂದು ಕೆಎಂಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

20 ವಿಧದ ಸಿಹಿತಿನಿಸುಗಳ ಮೇಲೆ ಶೇ 10ರಷ್ಟು ರಿಯಾಯಿತಿ ದರವನ್ನೂ ನೀಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.