ಬೆಂಗಳೂರು: ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಪ್ರಯುಕ್ತ ನಾರಾಯಣ ನೇತ್ರಾಲಯವು ನೇತ್ರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅಂಧರಿಗೆ ದೃಷ್ಟಿ ನೀಡಲು ಕಣ್ಣುಗಳನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದೆ.
‘ಮರಣದ ಬಳಿಕ ಕಣ್ಣುಗಳ ದಾನದಿಂದ ‘ಕಾರ್ನಿಯಲ್ ಅಂಧತ್ವ’ಕ್ಕೆ ಒಳಗಾದವರಿಗೆ ದೃಷ್ಟಿ ನೀಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ನೇತ್ರದಾನದ ಮಹತ್ವ ಅರಿತು ಕಣ್ಣುಗಳನ್ನು ದಾನ ಮಾಡಬೇಕು. ನೇತ್ರದಾನ ಪಾಕ್ಷಿಕದ ಭಾಗವಾಗಿ ಸೆ.2ರ ರಾತ್ರಿ 11.59ಕ್ಕೆ ‘ಮಧ್ಯರಾತ್ರಿ ಓಟ’ ಹಮ್ಮಿಕೊಳ್ಳಲಾಗಿದೆ. ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರಾಜೇಂದ್ರ ಸಿಂಗ್‌ಜಿ ಆರ್ಮಿ ಅಫೀಸರ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾರಂಭವಾಗುವ ಓಟ, ಅದೇ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ’ ಎಂದು ಆಸ್ಪತ್ರೆ ತಿಳಿಸಿದೆ.
‘ಈ ಓಟದಲ್ಲಿ ಪಾಲ್ಗೊಳ್ಳುವವರು ಇದೇ 30ರ ರಾತ್ರಿ 10 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬೇಕು’ ಎಂದು ಹೇಳಿದೆ.
ಸಂಪರ್ಕ ಸಂಖ್ಯೆ: 9741685555
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.