ಬೆಂಗಳೂರು: ಹಣಕಾಸು ಸೇವಾ ಕಂಪನಿ ರೆಲಿಗೇರ್ ಎಂಟರ್‌ಪ್ರೈಸಸ್ ಹಾಗೂ ‘ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಪ್ ಥಿಂಗ್ಸ್ ಕುರಿತ ನಾಸ್ಕಾಂ ಶ್ರೇಷ್ಠತಾ ಕೇಂದ್ರ’ವು ಪಾಲುದಾರಿಕೆಯೊಂದಕ್ಕೆ ಸಹಿ ಮಾಡಿವೆ. ರೆಲಿಗೇರ್‌ಗೆ ಅಗತ್ಯವಿರುವ ತಂತ್ರಜ್ಞಾನ ಸೇವೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಇದು ಹೊಂದಿದೆ.
ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್, ಡ್ರೋನ್ ಮುಂತಾದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳೊಂದಿಗೆ ನಾಸ್ಕಾಂ ಹೊಂದಿರುವ ಸಂಪರ್ಕವನ್ನು ರೆಲಿಗೇರ್ ಸಮೂಹಕ್ಕೆ ಅಗತ್ಯವಿರುವ ರೀತಿಯಲ್ಲಿ ಬಳಸಿಕೊಳ್ಳುವ ಅಂಶ ಕೂಡ ಒಪ್ಪಂದದಲ್ಲಿ ಇದೆ.
‘ತಂತ್ರಜ್ಞಾನದ ಹೊಸತನವನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಹಣಕಾಸು ಸೇವೆ ನೀಡಲು ನಾಸ್ಕಾಂ ಜೊತೆಗಿನ ಸಹಭಾಗಿತ್ವವು ನಮ್ಮ ಪಾಲಿಗೆ ಮಹತ್ವದ ಮೈಲಿಗಲ್ಲು’ ಎಂದು ಈ ಒಪ್ಪಂದ ಕುರಿತು ರೆಲಿಗೇರ್ ಎಂಟರ್‌ಪ್ರೈಸಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಡಾ. ರಶ್ಮಿ ಸಾಲುಜಾ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.