ಬೆಂಗಳೂರು: ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಆಗಸ್ಟ್ 11 ಮತ್ತು 12ರಂದು ರಾಷ್ಟ್ರೀಯ ಸಮಾವೇಶ, ಪ್ರಶಸ್ತಿ ಪ್ರದಾನ ಮತ್ತು ತಿದ್ದುಪಡಿ ಮಾಡಿದ ಗಣಿ ನಿಯಮಗಳು ಮತ್ತು ಗಣಿಗಾರಿಕೆ ಉದ್ಯಮದ ಮೇಲೆ ಅದರ ಪ್ರಭಾವದ ಕುರಿತು ವಿಚಾರ ಸಂಕಿಣ ಆಯೋಜಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಎಂಟಿ ರಂಗಾರೆಡ್ಡಿ, ‘ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ’ಗೆ ಗಣಿ ನಿಯಂತ್ರಣಾಧಿಕಾರಿ ವಿ. ಜಯಕೃಷ್ಣ ಬಾಬು, ಗಣಿ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಕೆ. ಮಧುಸೂದನ್ ಮತ್ತು ಬೆಂಗಳೂರು ಗಣಿ ಸುರಕ್ಷತಾ ನಿರ್ದೇಶಕ ಮುರಳೀಧರ ಬಿದರಿ ಆಯ್ಕೆಯಾಗಿದ್ದಾರೆ. ‘ಜೀವಮಾನ ಸಾಧನೆ ಪ್ರಶಸ್ತಿ’ಗೆ ಎಫ್‌ಐಇ ಮಾಜಿ ನಿರ್ದೇಶಕ ಡಿ.ವಿ. ಪಿಚ್ಚಮುತ್ತು ಅವರಿಗೆ ನೀಡಲಾಗುವುದು. ‘ಐಇಐ ಯಂಗ್ ಎಂಜಿನಿಯರ್ ಪ್ರಶಸ್ತಿ’ಗೆ ಧನ್‌ಬಾದ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕ ಅಶೋಕ್ ಕುಮಾರ್, ಹೇಮಂತ್ ಅಗರವಾಲ್, ಸತ್ಯ ಪ್ರಕಾಶ್ ಸಾಹು ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.
ಸಮಾವೇಶವನ್ನು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಗಣಿ ಸುರಕ್ಷತೆ ಉಪನಿರ್ದೇಶಕ ದೇವು ಕುಮಾರ್ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.