ADVERTISEMENT

ರಾಷ್ಟ್ರೀಯ ಧ್ವಜ ದಿನ: ವಿಶೇಷ ಕವರ್ ಬಿಡುಗಡೆ ಇಂದು

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 20:12 IST
Last Updated 21 ಜುಲೈ 2023, 20:12 IST
   

ಬೆಂಗಳೂರು: ರಾಷ್ಟ್ರಧ್ವಜ ದಿನ–2023 ಅಂಗವಾಗಿ ಅಂಚೆ ಇಲಾಖೆ ಕರ್ನಾಟಕ ವೃತ್ತದಿಂದ ಜುಲೈ 22ರಂದು ಬೆಳಿಗ್ಗೆ 11ಕ್ಕೆ ವಿಶೇಷ ಕವರ್‌ ಬಿಡುಗಡೆಯಾಗಲಿದೆ. ರಾಖಿ ಪೋಸ್ಟ್‌ ಪ್ರಚಾರ ಮಾಡಲು ಇದೇ ಸಂದರ್ಭದಲ್ಲಿ ವಿಶೇಷ ರಾಖಿ ಲಕೋಟೆ ಕೂಡ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಪೋಸ್ಟ್ ಮಾಸ್ಟರ್ ತಿಳಿಸಿದ್ದಾರೆ.

ಕರ್ನಾಟಕ ಸರ್ಕಲ್‌ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಬಿಡುಗಡೆ ಮಾಡಲಿದ್ದಾರೆ. ವಿಶೇಷ ಕವರ್‌ಗಳು ಬೆಂಗಳೂರು ಜಿಪಿಒ ಅಂಚೆಚೀಟಿಗಳ ಸಂಗ್ರಹಾಲಯ, ಮಂಗಳೂರು, ಮೈಸೂರು ಮತ್ತು ಕರ್ನಾಟಕ ಪೋಸ್ಟಲ್ ಸರ್ಕಲ್‌ನಲ್ಲಿರುವ ಬೆಳಗಾವಿ ಮುಖ್ಯ ಕಚೇರಿಗಳಲ್ಲಿ ಮತ್ತು ಇ-ಪೋಸ್ಟ್ ಆಫೀಸ್‌ನಲ್ಲಿ (www.Indiapost.gov.in) ಮಾರಾಟಕ್ಕೆ ಲಭ್ಯವಿದೆ. 

ಆಗಸ್ಟ್ 30 ರಂದು ನಡೆಯುವ ರಕ್ಷಾ ಬಂಧನ ಆಚರಣೆಯ ಸಂದರ್ಭದಲ್ಲಿ ‘ರಾಖಿ ಪೋಸ್ಟ್’ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು, ಶುಭಾಶಯ ಕಳುಹಿಸಲು ಸಹಾಯ ಮಾಡಲಿದೆ. ಜುಲೈ 26ರವರೆಗೆ ಈ ಸೇವೆ ಇರಲಿದ್ದು, ಭಾರತದ ಯಾವುದೇ ಮೂಲೆಯ ವಿಳಾಸ ನೀಡಿದರೂ ಆ.10ರಂದು ತಲುಪಿಸಲಾಗುವುದು. https://www.karnatakapost.gov.in/Rakhi_Post ಗೆ ಪ್ರವೇಶಿಸುವ ಮೂಲಕ ರಾಖಿ ಪೋಸ್ಟ್ ಸೇವೆಯನ್ನು ಪಡೆಯಬಹುದು ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.