ADVERTISEMENT

‘ರಾಜಕೀಯಕ್ಕೂ ಅನ್ವಯ ಆಗುವುದೇ ಕೆನೆಪದರ’

ಹಿರಿಯ ವಕೀಲ ರವಿವರ್ಮಕುಮಾರ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 21:00 IST
Last Updated 9 ಡಿಸೆಂಬರ್ 2018, 21:00 IST
'ಸಾರ್ವಜನಿಕ ನೀತಿ ಅಧ್ಯಯನ ಕೇಂದ್ರ'ವನ್ನು ರವಿವರ್ಮ ಕುಮಾರ್‌ ಉದ್ಘಾಟಿಸಿದರು. ಕೇಂದ್ರದ ನಿರ್ದೇಶಕ ಸೋನಿ ಪೆಲ್ಲಿಸ್ಸೇರಿ, ಮಾಹಿತಿ ಹಕ್ಕು ಕಾರ್ಯಕರ್ತೆ ಅರುಣ್ ರಾಯ್, ಪ್ರಜಾತಂತ್ರ ಶಾಲೆ ನಿರ್ದೇಶಕ ನಿಖಿಲ್ ಡೇ, ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಎನ್.ಜಯರಾಮ್, ಅಧ್ಯಯನ ಕೇಂದ್ರದ ಅಧ್ಯಕ್ಷ ಬಾಬು ಮ್ಯಾಥ್ಯೂ, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ವೆಂಕಟರಾವ್ ಇದ್ದರು -- -– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನ್ವಯವಾಗುವ ಕೆನೆಪದರ ನೀತಿಗಳು ರಾಜಕೀಯ ಕ್ಷೇತ್ರಕ್ಕೂ ಅನ್ವಯವಾಗುವುದೇ. ಅಧಿಕಾರ ಅನುಭವಿಸಿರುವವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ಕಾನೂನು ತರಲು ಸಾಧ್ಯವೇ’ ಎಂದು ಹಿರಿಯ ವಕೀಲ ರವಿವರ್ಮ ಕುಮಾರ್‌ ಪ್ರಶ್ನಿಸಿದರು.

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ದಲ್ಲಿ ‘ಸಾರ್ವಜನಿಕರ ನೀತಿ ಅಧ್ಯಯನ ಕೇಂದ್ರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಖಾಸಗಿತನ ಮೂಲಭೂತ ಹಕ್ಕು ಎಂದು ಸ್ಪಷ್ಟಪಡಿಸಿದ್ದು ಸುಪ್ರಿಂ ಕೋರ್ಟ್‌. ತ್ರಿವಳಿ ತಲಾಖ್‌ ರದ್ದತಿಯಂತಹ ಮಹತ್ವದ ತೀರ್ಪನ್ನೂ ಇದು ನೀಡಿದೆ. ಅದರ ಜೊತೆಗೆ ಅನವಶ್ಯಕವಾಗಿ ದಲಿತ ವಿರೋಧಿ ತೀರ್ಪುಗಳನ್ನೂ ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶ್ರೀಮಂತರನ್ನು ಮೇಲ್ಜಾತಿಯವರಷ್ಟೇ ಸಮಾನರಾಗಿ ಕಾಣಲು ಸಾಧ್ಯವೇ. ಯಾವ ಆಧಾರದ ಮೇಲೆ ದಲಿತರಲ್ಲಿ ಆಡಳಿತಾತ್ಮಕ ದಕ್ಷತೆಯ ಕೊರತೆಯಿದೆ ಎಂದು ಹೇಳುತ್ತೀರಿ’ ಎಂದು ಪ್ರಶ್ನಿಸಿದರು.

ADVERTISEMENT

‘ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ದೇಶದ ವಾಸ್ತವ ಅರಿಯಲು ಕೊಳೆಗೇರಿಗಳಲ್ಲಿ ಅಧ್ಯಯನ ನಡೆಸುವುದು ಸೂಕ್ತ. ಸಾಮಾಜಿಕ ನ್ಯಾಯ, ಸಂವಿಧಾನ ಮೌಲ್ಯಗಳು, ಜಾತ್ಯತೀತ ವಿಚಾರಗಳ ಬಗ್ಗೆ ಅವರಿಗೆ ತರಬೇತಿ ನೀಡಬೇಕು. ಪಠ್ಯಕ್ರಮದಲ್ಲಿ ಶಾಸಕಾಂಗ ರಚನೆ ಕುರಿತ ಕೋರ್ಸ್ ಅಳವಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.