ADVERTISEMENT

ವಚನ ನವರಾತ್ರಿ ಎಲ್ಲೆಡೆಯಾಗಲಿ: ಶಾಸಕ ಎಸ್.ಟಿ. ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 23:30 IST
Last Updated 12 ಅಕ್ಟೋಬರ್ 2024, 23:30 IST
<div class="paragraphs"><p>ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ವಿಜಯದಶಮಿಯಲ್ಲಿ ‘ಬಸವಣ್ಣನವರ ಉತ್ಸವ’ದ ಮೆರವಣಿಗೆಯಲ್ಲಿ ಶಾಸಕ ಎಸ್.ಟಿ. ಸೋಮಶೇಖರ್‌ ಭಾಗವಹಿಸಿದ್ದರು</p></div>

ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ವಿಜಯದಶಮಿಯಲ್ಲಿ ‘ಬಸವಣ್ಣನವರ ಉತ್ಸವ’ದ ಮೆರವಣಿಗೆಯಲ್ಲಿ ಶಾಸಕ ಎಸ್.ಟಿ. ಸೋಮಶೇಖರ್‌ ಭಾಗವಹಿಸಿದ್ದರು

   

ಬೆಂಗಳೂರು: ವಚನಕಾರ್ತಿಯರ ಪರಿಚಯ ಮಾಡಿಕೊಟ್ಟು, ಅವರ ವಚನ, ನಿರ್ವಚನ ಮಾಡುವ ‘ವಚನ ನವರಾತ್ರಿ’ ನಗರದ ಎಲ್ಲ ಭಾಗಗಳಲ್ಲೂ ನಡೆಯಬೇಕು ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌ ಅಭಿಪ್ರಾಯಪಟ್ಟರು.

ವಚನಜ್ಯೋತಿ ಬಳಗವು ಕಲ್ಯಾಣ ಬಡಾವಣೆಯಲ್ಲಿ ಆಯೋಜಿಸಿದ್ದ ‘ವಚನ ವಿಜಯದಶಮಿ’ಯಲ್ಲಿ ಅವರು ಮಾತನಾಡಿದರು.

ADVERTISEMENT

‘ಸಾಂಪ್ರದಾಯಿಕ ದೇವಿಯರ ನವರಾತ್ರಿಗಿಂತ ವಿಭಿನ್ನ ವಿಶಿಷ್ಟವಾಗಿ ಕನ್ನಡದ ಸ್ವತಂತ್ರ ವಚನಕಾರ್ತಿಯರನ್ನು ‘ವಚನ ನವರಾತ್ರಿ’ಯಲ್ಲಿ ಪರಿಚಯಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ. ಇವುಗಳು ನಿರಂತರವಾಗಿ ನಡೆಯಬೇಕು’ ಎಂದು ತಿಳಿಸಿದರು.

‘ವಚನ ಸಂಸ್ಕೃತಿ ಪ್ರಸರಣವನ್ನು ವಚನಜ್ಯೋತಿ ಬಳಗ ನಡೆಸುತ್ತಿರುವುದು ಎಲ್ಲ ಸಂಘ– ಸಂಸ್ಥೆಗಳಿಗೂ
ಮಾದರಿ. ಬಳಗದ ‘ಮಕ್ಕಳ ವಚನ ಮೇಳ’ಕ್ಕೆ ತಮ್ಮ ನೆರವು ಇರುತ್ತದೆ’ ಎಂದು ಹೇಳಿದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ವಚನ ನವರಾತ್ರಿಯಲ್ಲಿ ಅಕ್ಕನಾಗಮ್ಮ, ಬೊಂತಾದೇವಿ, ಅಮುಗೆ ರಾಯಮ್ಮ, ಅಕ್ಕಮ್ಮ, ಗೊಗ್ಗವ್ವೆ, ಸತ್ಯಕ್ಕ, ರೆಮ್ಮವ್ವೆ, ಮುಕ್ತಾಯಕ್ಕ, ಮೋಳಿಗೆ ಮಹಾದೇವಿ ಸೇರಿದಂತೆ ಒಂಬತ್ತು ವಚನಕಾರ್ತಿಯರನ್ನು ಪರಿಚಯಿಸಲಾಯಿತು. ಅವರ ವಚನ ನಿರ್ವಚನ ನಡೆಸಲಾಗಿದ್ದು, ರಾಜಧಾನಿಯ ವಿವಿಧ ಅಕ್ಕನ ಬಳಗಗಳು ವಚನ ಸಂಗೀತ ಸೇವೆ ನಡೆಸಿವೆ’ ಎಂದು ತಿಳಿಸಿದರು. 

ಸ್ಥಳೀಯ ಪೌರ ಕಾರ್ಮಿಕರನ್ನು ಸೀರೆ, ವಸ್ತ್ರ ನೀಡಿ ಸತ್ಕರಿಸಲಾಯಿತು. ಮರಳವಾಡಿಯ ಶಿವಮಠದ ಮೃತ್ಯುಂಜಯ ಸ್ವಾಮೀಜಿ, ವಚನಜ್ಯೋತಿ ಬಳಗದ ಮಹೇಶ  ಬೆಲ್ಲದ, ಪ್ರಸನ್ನ, ರಾಜಾ ಗುರುಪ್ರಸಾದ್, ಪ್ರಭು ಇಸುವನಹಳ್ಳಿ, ಸಂಚಾಲಕರಾದ ಮಧು ಶಿವಕುಮಾರ್, ದಿವಾಕರ್, ಕನ್ನಡ ಸಂಘರ್ಷ ಸಮಿತಿಯ ನಾಗರಾಜಸ್ವಾಮಿ, ಜಾಗತಿಕ ಲಿಂಗಾಯತದ ವೀರಭದ್ರಯ್ಯ, ಕಲ್ಯಾಣ ಬಡಾವಣೆಯ ಹಿರಿಯರಾದ ಚೆನ್ನಮಲ್ಲಯ್ಯ, ಚಂದ್ರಶೇಖರಯ್ಯ, ಮಲ್ಲಿಕಾರ್ಜುನಯ್ಯ, ಬಸವರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.