ADVERTISEMENT

ನೀಟ್: ವಿಷನ್‌ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 15:29 IST
Last Updated 12 ಜೂನ್ 2024, 15:29 IST
ಚೇತನ ಎಸ್‌.ವೈ.
ಚೇತನ ಎಸ್‌.ವೈ.   

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌ ಯುಜಿ) ವಿಷನ್‌ ನೀಟ್‌ ಅಕಾಡೆಮಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಅಕಾಡೆಮಿಯ ಚೇತನ್‌ ಎಸ್‌.ವೈ. (690), ಸುದರ್ಶನ್ ಟಿ.ಆರ್. (685), ಸೃಜನ್‌ ಎನ್‌. (677), ವಿವೇಕ್‌ ಎಸ್. ಗೌಡ (675), ಸಂತೋಷ್ ಎನ್.ಕೆ. (675) ಹಾಗೂ ಅಕ್ಷಯ್‌ ಕಲ್ಮಠ (675) ಉತ್ತಮ ಅಂಕಗಳನ್ನು ಪಡೆದಿದ್ದಾರೆ.

ಪ್ರತಿವರ್ಷ 350ರಿಂದ 400 ವಿದ್ಯಾರ್ಥಿಗಳು ವಿಷನ್‌ ಸಂಸ್ಥೆಯಿಂದ ನೀಟ್‌ ಕೋಚಿಂಗ್‌ ಪಡೆದು, ಉತ್ತಮ ರ್‍ಯಾಂಕ್‌ ಪಡೆದು ಸರ್ಕಾರಿ (ಉಚಿತ) ವೈದ್ಯಕೀಯ ಸೀಟ್  ಪಡೆಯುತ್ತಿದ್ದಾರೆ. ಇದುವರೆಗೂ 4,350ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ತರಬೇತಿ ಪಡೆದು ವೈದ್ಯರಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನೀಟ್‌ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಾರೆ. ಅವರಿಗೆ ಅನುಭವಿ ಅಧ್ಯಾಪಕರಿಂದ 10 ತಿಂಗಳ ತರಬೇತಿ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

‘ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿನಿಯಲಯದ ಸೌಲಭ್ಯವಿದೆ. ಉತ್ತಮ ರ್‍ಯಾಂಕ್‌ ಪಡೆದಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್ ಇರಲಿದೆ’ ಎಂದು ಪ್ರಕಟಣೆ ತಿಳಿಸಿದೆ. 

ಹೆಚ್ಚಿನ ಮಾಹಿತಿಗೆ www.neet.visionedu.in ಅಥವಾ 080–47185111 ಗೆ ಸಂಪರ್ಕಿಸಬಹುದು.

ಸುದರ್ಶನ್ ಟಿ.ಆರ್.
ಸೃಜನ್‌ ಎನ್‌.
ವಿವೇಕ್ ಗೌಡ
ಸಂತೋಷ್ ಎನ್.ಕೆ.
ಅಕ್ಷಯ್ ಕಲ್ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.