ಬೆಂಗಳೂರು: ‘ನೀಟ್’ನಲ್ಲಿ ತೇರ್ಗಡೆಯಾಗಿರುವ 200ಕ್ಕೂ ಅಧಿಕ ವಿದ್ಯಾರ್ಥಿಗಳುಹಾಗೂ ಅವರ ಪೋಷಕರು ಡಿ.ಆರ್.ಅಕಾಡೆಮಿ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿದರು.
ಡಿ.ಆರ್.ಅಕಾಡೆಮಿಯಲ್ಲಿ ತರಬೇತಿ ಪಡೆದ 123 ವಿದ್ಯಾರ್ಥಿಗಳು 2018ರ ‘ನೀಟ್’ನಲ್ಲಿ ಅರ್ಹತೆ ಪಡೆದಿದ್ದರು. 216 ವಿದ್ಯಾರ್ಥಿಗಳು 2019ರಲ್ಲಿ ವೈದ್ಯಕೀಯ ಪದವಿಗೆ ಪ್ರವೇಶ ಪಡೆಯುವ ಅವಕಾಶ ಪಡೆದಿದ್ದರು. ವ್ಯವಸ್ಥಾಪಕ ನಿರ್ದೇಶಕ ಪಿ.ದೇವೇಂದ್ರ ರೆಡ್ಡಿ ಹಾಗೂ ಇತರ ನಿರ್ದೇಶಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
‘ನೀಟ್’ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿದ ಡಾ.ಮಹೇಶ್ ಜೋಷಿ, ‘ದೃಢ ನಿಶ್ಚಯ ಹಾಗೂ ದೃಢ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ವೈದ್ಯರಲ್ಲಿ ಪ್ರಾಮಾಣಿಕತೆ ಹಾಗೂ ಮಾನವೀಯತೆ ಇರಬೇಕು’ ಎಂದು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ದೇವೇಂದ್ರ ರೆಡ್ಡಿ, ‘ಶಿಕ್ಷಣದಲ್ಲಿ ಶಿಸ್ತು, ಸಿದ್ಧತೆ ಹಾಗೂ ಬದ್ಧತೆ ಇದ್ದರಷ್ಟೇ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾದರೆ ಅಧ್ಯಯನದಲ್ಲಿ ಯಶಸ್ಸು ಸಾಧಿಸುವುದು ಕಷ್ಟ. ನಿರಂತರ ಕಲಿಕೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಒಯ್ಯುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.