ADVERTISEMENT

ಮನುಷ್ಯತ್ವ ಉಳಿಸುವುದು ವೈಚಾರಿಕತೆ: ನಿಜಗುಣಾನಂದ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:43 IST
Last Updated 4 ಅಕ್ಟೋಬರ್ 2024, 23:43 IST
<div class="paragraphs"><p>ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ ಅವರು ಟ್ರಸ್ಟ್‌ನ ಲಾಂಛನ ಲೋಕಾರ್ಪಣೆ ಮಾಡಿದರು. (ಎಡದಿಂದ) ಟ್ರಸ್ಟ್‌ನ ಖಜಾಂಜಿ ಓಂ ಪ್ರಕಾಶ್, ಸದಸ್ಯ ಶಿವು, ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾದ (ಅಠವಳೆ) ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಉಪಸ್ಥಿತರಿದ್ದರು </p></div>

ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ ಅವರು ಟ್ರಸ್ಟ್‌ನ ಲಾಂಛನ ಲೋಕಾರ್ಪಣೆ ಮಾಡಿದರು. (ಎಡದಿಂದ) ಟ್ರಸ್ಟ್‌ನ ಖಜಾಂಜಿ ಓಂ ಪ್ರಕಾಶ್, ಸದಸ್ಯ ಶಿವು, ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾದ (ಅಠವಳೆ) ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ವೈಚಾರಿಕತೆ ಅಂದರೆ ಸಂಪ್ರದಾಯ ವಿರೋಧಿಸುವುದು ಎಂದು ಹಲವರು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ಸಂಪ್ರದಾಯ ವಿರೋಧಿಸುವುದು ವೈಚಾರಿಕತೆಯಲ್ಲ. ಮನುಷ್ಯತ್ವವನ್ನು ಉಳಿಸುವುದೇ ನಿಜವಾದ ವೈಚಾರಿಕತೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು. 

ADVERTISEMENT

ಡಾ.ಬಿ.ಟಿ.ಲಲಿತಾ ನಾಯಕ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅನ್ನು ನಗರದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅತಿಯಾದ ವೈಚಾರಿಕತೆ ಮನುಷ್ಯರನ್ನು ಸ್ವೇಚ್ಛಾಚಾರಕ್ಕೆ ತೆಗೆದುಕೊಂಡು ಹೋಗುತ್ತದೆ. ಅದೇ ರೀತಿ, ಅತಿಯಾದ ಮೂಢನಂಬಿಕೆ ಮನುಷ್ಯನನ್ನು ಅಧಃಪತನಕ್ಕೆ ಕರೆದೊಯ್ಯುತ್ತದೆ. ತಾಯಿ ಹೃದಯದ ಮನೋಭಾವ ಇರುವಂತಹ ವ್ಯಕ್ತಿಗಳು ಮಾತ್ರ ಸುಂದರ ಸಮಾಜವನ್ನು ಕಟ್ಟಲು ಸಾಧ್ಯ. ಅಂತಹ ಹೃದಯ ಮನುಷ್ಯನಿಗೆ ಬಹಳ ಮುಖ್ಯ’ ಎಂದು ಅಭಿಪ್ರಾಯಪಟ್ಟರು.

‘ಮನುಷ್ಯನಿಗೆ ದೇವರು ಧರ್ಮಕ್ಕಿಂತ ಮೊದಲು ಅನ್ನದ ಅಗತ್ಯವಿದೆ. ಅನ್ನ, ಅರಿವು, ಔಷಧ ಹಾಗೂ ಆಶ್ರಯವನ್ನು ಮನುಷ್ಯನಿಗೆ ಮೂಲಭೂತವಾಗಿ ಒದಗಿಸಬೇಕೆಂದು ಬಸವಣ್ಣ ಹೇಳಿದ್ದಾರೆ. ದೇವರು ಮತ್ತು ಧರ್ಮದ ಬಗ್ಗೆ ಸರಿಯಾದ ರೀತಿಯ ಪರಿಕಲ್ಪನೆ ಕೊಡಬೇಕಾಗಿದೆ. ಇವುಗಳ ಬಗ್ಗೆ ಸರಿಯಾದ ಪರಿಕಲ್ಪನೆ ನೀಡದಿದ್ದರೆ ಧಾರ್ಮಿಕ ಮುಖಂಡರು ಜನರನ್ನು ಗ್ರಾಹಕರಂತೆ ನೋಡುತ್ತಾರೆ’ ಎಂದು ಹೇಳಿದರು. 

‘ದಕ್ಷ ಆಡಳಿತದ ಸ್ವರೂಪ’ ಎಂಬ ವಿಷಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿದರು. ಟ್ರಸ್ಟ್‌ನ ಸಂಸ್ಥಾಪನಾಧ್ಯಕ್ಷೆ ಎಸ್‌.ಎಲ್. ಉಮಾದೇವಿ ಅವರು ಟ್ರಸ್ಟ್‌ ಸ್ಥಾಪನೆಯ ಉದ್ದೇಶಗಳನ್ನು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.