ADVERTISEMENT

ಮೀನುಕುಂಟೆ: ವಸಂತಕುಮಾರ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಮೇ 2024, 16:13 IST
Last Updated 29 ಮೇ 2024, 16:13 IST
ಎಚ್‌.ಎನ್‌.ವಸಂತಕುಮಾರ್‌
ಎಚ್‌.ಎನ್‌.ವಸಂತಕುಮಾರ್‌   

ಯಲಹಂಕ: ಜಾಲಾ ಹೋಬಳಿ ಮೀನುಕುಂಟೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಚ್‌.ಎನ್‌. ವಸಂತಕುಮಾರ್‌ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕಾಗಿ (ಸಾಮಾನ್ಯ ವರ್ಗ) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ವಸಂತಕುಮಾರ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶಿವಶಂಕರ್‌ ನಾಮಪತ್ರ ಸಲ್ಲಿಸಿದ್ದರು. 21 ಸದಸ್ಯಬಲ ಹೊಂದಿರುವ ಪಂಚಾಯಿತಿಯಲ್ಲಿ ವಸಂತಕುಮಾರ್‌ 12 ಮತ್ತು ಶಿವಶಂಕರ್‌ 9 ಮತಗಳನ್ನು ಪಡೆದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಬೈನಹಳ್ಳಿ ನರಸಿಂಹಮೂರ್ತಿ, ಟಿ.ಪಿ. ಸತೀಶ್‌, ವಿ. ಸೌಮ್ಯ, ಶುಭ, ಪುಷ್ಪಾ ಚಂದ್ರು, ಲಕ್ಷ್ಮಿ, ಶಿಲ್ಪಾ, ಶೈಲಜಾ, ರಂಜಿತಾ, ಹೇಮಾವತಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.