ಬೆಂಗಳೂರು: ನಿನಾಸಂ ಮರುತಿರುಗಾಟ 2020ರ‘ಅಂತರಂಗ’ ನಾಟಕ ಪ್ರದರ್ಶನವನ್ನುದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (ಬಿಐಸಿ) ಸೋಮವಾರ (ಫೆ.24) ಸಂಜೆ 7ಗಂಟೆಗೆ ಆಯೋಜಿಸಲಾಗಿದೆ.
ಈ ನಾಟಕವನ್ನುಫ್ರೆಂಚ್ ನಾಟಕಕಾರ ಮಾರಿಸ್ ಮೆಟರ್‍ಲಿಂಕ್ ರಚಿಸಿದ್ದು, ಕನ್ನಡಕ್ಕೆಮಾಧವ ಚಿಪ್ಪಳಿ ಅನುವಾದಿಸಿದ್ದಾರೆ.ಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದಾರೆ.ಎಂ.ಎಂ. ಕೃಷ್ಣಮೂರ್ತಿ ಅವರಬೆಳಕಿನ ವಿನ್ಯಾಸ ಹಾಗೂ ನಾಗೇಂದ್ರ ಶ್ರೀನಿವಾಸ್ ಮತ್ತು ಚಂದನ್ ಎನ್. ಅವರರಂಗ ಸಜ್ಜಿಕೆ ಇದೆ.
ನಾಟಕದ ಕುರಿತು:ಬದುಕು ಮತ್ತು ಸಾವಿನ ಸಹವಾಸವನ್ನುಈ ನಾಟಕದ ಮೂಲಕ ಮೆಟರ್‍ಲಿಂಕ್ ತೋರಿಸುತ್ತಾರೆ. ಇವೆರಡೂ ಒಂದನ್ನೊಂದು ವಿರೋಧಿಸುವಂತೆ ಬಡಿದಾಡಿಕೊಳ್ಳುತ್ತವೆ. ಇದರಲ್ಲಿ ಬದುಕೇ ಹೆಚ್ಚು ಶಕ್ತಿಯುತವೆಂಬಂತೆ ಕಂಡರೂ ಕಡೆಗೂ ಗೆಲ್ಲುವುದು ಯಾರು ಎಂಬ ಕುತೂಹಲ ಕೊನೆಯವರೆಗೂ ಉಳಿಯುತ್ತದೆ. ಎಲ್ಲರ ಬದುಕೂ ಸೂತ್ರದ ಗೊಂಬೆಗಳಂತೆಯೇ ತೆಳುವಾದ ದಾರವೊಂದನ್ನು ಆಶ್ರಯಿಸಿ ನೇತಾಡುತ್ತಿರುತ್ತದೆ.
ಇಂಥ ಲೋಕದೊಳಕ್ಕೆ ನಮ್ಮನ್ನು ಕರೆದೊಯ್ಯುವ ಮೆಟರ್‍ಲಿಂಕ್ ಈ ಜಗದ ಕತ್ತಲೆಯನ್ನು ಅಷ್ಟಿಷ್ಟು ಬೆಳಗಿಸಿ, ನಮ್ಮ ತಿಳಿವಿನಾಚೆಯ ವಲಯದೊಳಗಿರುವ
ಸಂಗತಿಗಳ ದರ್ಶನವನ್ನು ಮಾಡಿಸುತ್ತಾರೆ.
ಸಂಪರ್ಕ: 9886599675
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.