ADVERTISEMENT

ತಪಾಸಣೆ ಹೆಸರಿನಲ್ಲಿ ಕಿರುಕುಳ ಬೇಡ; ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರಗೆ ಪತ್ರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 23:28 IST
Last Updated 20 ಜುಲೈ 2024, 23:28 IST
<div class="paragraphs"><p>ಆರ್.ಬಿ ತಿಮ್ಮಾಪುರ</p></div>

ಆರ್.ಬಿ ತಿಮ್ಮಾಪುರ

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಅಬಕಾರಿ ಇಲಾಖೆಯ ಅಧಿಕಾರಿಗಳು ಪಬ್, ಬಾರ್ ಮತ್ತು ರೆಸ್ಟೊರೆಂಟ್‌ಗಳಿಗೆ ನೋಟಿಸ್‌ ನೀಡಿ, ತಪಾಸಣೆ ಹೆಸರಿನಲ್ಲಿ ಕಿರುಕುಳ ನೀಡುವುದನ್ನು ತಡೆಯಬೇಕು’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಎಚ್.ಎಸ್. ಸುಬ್ರಮಣ್ಯ ಹೊಳ್ಳ ಒತ್ತಾಯಿಸಿದ್ದಾರೆ.

ADVERTISEMENT

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಪತ್ರ ಬರೆದಿರುವ ಅವರು, ‘ಅಬಕಾರಿ ತೆರಿಗೆ ಮೂಲಕ ನಾವು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಪಾವತಿಸುತ್ತಿದ್ದೇವೆ. ಇದರ ಜೊತೆಗೆ ವಾರ್ಷಿಕವಾಗಿ ಸನ್ನದುದಾರರು ₹9 ಲಕ್ಷದಿಂದ ₹10 ಲಕ್ಷ ಪರವಾನಗಿ ಶುಲ್ಕ ಪಾವತಿಸುತ್ತಿದ್ದೇವೆ. ಶೇಕಡಾ 18ರಷ್ಟು ಜಿಎಸ್‌ಟಿ ಭರಿಸುತ್ತಿದ್ದೇವೆ. ಇದಲ್ಲದೆ ಬಹಳಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದೇವೆ. ಆದರೂ ಸಹ ನಮ್ಮ ಉದ್ಯಮಕ್ಕೆ ಹಲವು ಅಡಚಣೆಗಳು ಆಗುತ್ತಿವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಆನ್‌ಲೈನ್‌ ಮೂಲಕ ಪರವಾನಗಿ ಶುಲ್ಕ ಪಾವತಿ ಹಾಗೂ ಪರವಾನಗಿ ಪಡೆಯುವುದು ಸಮರ್ಪಕವಾಗಿ ಸಾಧ್ಯವಾಗು ತ್ತಿಲ್ಲ. ಸಿಎಲ್‌-7ನಿಂದ ಸಿಎಲ್‌-6ಕ್ಕೆ ಬದಲಾಯಿಸುವಾಗ ಹೆಚ್ಚುವರಿ ಶುಲ್ಕ ಪಾವತಿಸಿದರೂ ಪರವಾನಗಿ ಸಿಗುತ್ತಿಲ್ಲ. ಎಲ್ಲ ಸನ್ನದುದಾರರ ಅಳಿವು, ಉಳಿವು ಹಾಗೂ ಬೆಳವಣಿಗೆಗೆ ಅಬಕಾರಿ ಇಲಾಖೆಯ ಸಹಕಾರ ಅಗತ್ಯ. ಇದರ ಜೊತೆಗೆ ಬೆಂಗಳೂರಿನಂತಹ ಮೆಟ್ರೊ ಮಹಾನಗರದಲ್ಲಿ ತಡರಾತ್ರಿ 2 ಗಂಟೆಯವರೆಗೆ ಪಬ್, ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.