ADVERTISEMENT

ಎನ್‌ಪಿಎಸ್‌ ಸಂಘದ ಅಧ್ಯಕ್ಷರ ವಿರುದ್ಧ ವಂಚನೆ ದೂರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 15:31 IST
Last Updated 2 ಡಿಸೆಂಬರ್ 2023, 15:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಹಣ ದುರುಪಯೋಗ ಪಡಿಸಿಕೊಂಡ ಸಂಬಂಧ ಹಾಲಿ ಅಧ್ಯಕ್ಷ ಶಾಂತರಾಮ್‌ ವಿರುದ್ಧ ನಗರದ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎನ್‌ಪಿಎಸ್‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎ.ನಾಗನಗೌಡ ದೂರು ನೀಡಿದ್ದಾರೆ.

ADVERTISEMENT

‘2017ರಿಂದ 2020ರ ಅವಧಿಯಲ್ಲಿ ಶಾಂತಾರಾಮ್ ಅವರು ಖರ್ಚು, ವೆಚ್ಚಗಳ ಬಿಲ್‌ಗಳಿಗೆ ನನ್ನ ಸಹಿ ನಕಲು ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿ ದೂರು ನೀಡಿದ್ದಾರೆ.

‘ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿ ಅವುಗಳನ್ನೇ ಅಸಲಿ ಬಿಲ್‌ ಎಂದು ತೋರಿಸಿದ್ದಾರೆ. ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘2006ರ ಏಪ್ರಿಲ್‌ 1ರಿಂದ ಸೇವೆಗೆ ಸೇರಿದ ಸುಮಾರು 1.96 ಲಕ್ಷ ನೌಕರರು ಇದ್ದಾರೆ. ಪಿಂಚಣಿ ಸೌಲಭ್ಯಕ್ಕಾಗಿ ಹೋರಾಟ ಮಾಡಿ, ನ್ಯಾಯ ಒದಗಿಸುವುದು ಹಾಗೂ ಸೇವಾ ಅವಧಿಗೆ ಮುಂಚೆ ನಿಧನರಾದ ನೌಕರರಿಗೆ ಸೌಲಭ್ಯ ಒದಗಿಸುವುದೇ ಸಂಘದ ಉದ್ದೇಶವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.