ಬೆಂಗಳೂರು: ‘ಯಕ್ಷಗಾನ ಕಲೆ ಪ್ರದರ್ಶಿಸುವ ಮೇಳಗಳು ತಿರುಗಾಟಕ್ಕೆ ಹೊರಡುವ ನವೆಂಬರ್ 12ರಂದು ಯಕ್ಷಗಾನ ದಿನವೆಂದು ಸರ್ಕಾರ ಘೋಷಿಸಬೇಕು’ ಎಂದು ಅರ್ಥಧಾರಿ, ಸಾಹಿತಿ ಮೋಹನ್ ಭಾಸ್ಕರ್ ಹೆಗಡೆ ಒತ್ತಾಯಿಸಿದರು.
ಯಕ್ಷ ಸಿಂಚನ ಟ್ರಸ್ಟ್‌ನ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯಕ್ಷಗಾನ ಕಲೆ ಕರಾವಳಿ ಮತ್ತು ಮಲೆನಾಡಿಗೆ ಸೀಮಿತವಾಗದೇ ರಾಜ್ಯದಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಯಕ್ಷಗಾನವನ್ನು ಕರ್ನಾಟಕದ ಪ್ರಾತಿನಿಧಿಕ ಕಲೆಯೆಂದು ಘೋಷಿಸಬೇಕು. ಭಾರತದ ನೃತ್ಯ ಪ್ರಕಾರಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ ಯಕ್ಷಗಾನವನ್ನು ಗುರುತಿಸಬೇಕು. ಇದಕ್ಕಾಗಿ ಸಾಂಸ್ಕೃತಿಕ ಆಂದೋಲನ ರೂಪುಗೊಳ್ಳುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಯಕ್ಷಗುರು ಹಾಗೂ ಭಾಗವತರಾದ ಉಮೇಶ್ ಭಟ್ ಬಾಡ ಅವರಿಗೆ 2024ನೇ ಸಾಲಿನ ‘ಸಾಧಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಬೆಂಗಳೂರಿನ ಯಕ್ಷಕಲಾ ಅಕಾಡೆಮಿ ಬಾಲಕಲಾವಿದರು ‘ಸುಭದ್ರಾ ಕಲ್ಯಾಣ’ ಪ್ರಸಂಗವನ್ನು ಪ್ರಸ್ತುತಪಡಿಸಿದರು. ಯಕ್ಷಸಿಂಚನ ತಂಡದ ಕಲಾವಿದರು ‘ಮಾನಿಷಾದ’ ಎಂಬ ಯಕ್ಷಗಾನವನ್ನು ಪ್ರದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.