ADVERTISEMENT

‘ಆನ್‌ಲೈನ್ ಸ್ನೇಹಿತೆ’ ಸೇವೆ: ₹ 7.30 ಲಕ್ಷ ಕಳೆದುಕೊಂಡ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 22:02 IST
Last Updated 31 ಡಿಸೆಂಬರ್ 2022, 22:02 IST
   

ಬೆಂಗಳೂರು: ಆನ್‌ಲೈನ್ ಮೂಲಕ ಸ್ನೇಹಿತೆ ಸೇವೆ ಪಡೆಯಲು ಮುಂದಾಗಿದ್ದ ನಗರದ ನಿವಾಸಿಯೊಬ್ಬರು ₹ 7.30 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

‘ಮಂಗಮ್ಮನಪಾಳ್ಯದ 44 ವರ್ಷದ ನಿವಾಸಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸ್ ಮೂಲಗಳು ತಿಳಿಸಿವೆ.

‘ವೃತ್ತಿಯಲ್ಲಿ ಟೈಲರ್ ಆಗಿರುವ ದೂರುದಾರರಿಗೆ ಆರೋಪಿ ಇತ್ತೀಚೆಗೆ ಕರೆ ಮಾಡಿದ್ದ. ‘ನಮ್ಮಲ್ಲಿ ಸ್ನೇಹಿತೆಯರ ಸೇವೆ ಲಭ್ಯವಿದೆ. ನಿಮಗೆ ಸ್ನೇಹಿತೆ ಬೇಕಾದರೆ ಕಳುಹಿಸುತ್ತೇವೆ. ನೋಂದಣಿ ಶುಲ್ಕ ಮಾತ್ರ ಪಾವತಿಸಬೇಕು’ ಎಂಬುದಾಗಿ ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ದೂರುದಾರ, ಆರಂಭದಲ್ಲಿ ₹ 2,100 ಪಾವತಿಸಿದ್ದರು. ಆದರೆ, ಯಾವುದೇ ಸ್ನೇಹಿತೆಯನ್ನು ಕಳುಹಿಸಿರಲಿಲ್ಲ.’

ADVERTISEMENT

‘ಪುನಃ ಹಣಕ್ಕೆ ಒತ್ತಾಯಿಸಿದ್ದ ಆರೋಪಿ, ದೂರುದಾರರಿಂದ ಮತ್ತಷ್ಟು ಹಣ ಪಡೆದಿದ್ದ. ಇದಾದ ನಂತರವೂ ಸ್ನೇಹಿತೆಯನ್ನು ಕಳುಹಿಸಿರಲಿಲ್ಲ. ಬೇಸತ್ತ ದೂರುದಾರ, ಹಣ ವಾಪಸು ನೀಡುವಂತೆ ಒತ್ತಾಯಿಸಿದ್ದರು. ಹಣ ಮರು
ಪಾವತಿಸಲು ಮತ್ತಷ್ಟು ಶುಲ್ಕ ಪಾವತಿಸಬೇಕೆಂದು ಆರೋಪಿ ಹೇಳಿದ್ದ. ಅದನ್ನೂ ನಂಬಿದ್ದ ದೂರುದಾರ ಹಂತ ಹಂತವಾಗಿ ₹ 7.30 ಲಕ್ಷ ನೀಡಿದ್ದರು. ಇದಾದ ನಂತರ, ಆರೋಪಿ ನಾಪತ್ತೆಯಾಗಿದ್ದಾನೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.