ADVERTISEMENT

₹ 5.20 ಲಕ್ಷದೊಂದಿಗೆ ‘ಆನ್‌ಲೈನ್ ವರ’ ಪರಾರಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 7:26 IST
Last Updated 28 ಜೂನ್ 2020, 7:26 IST
   

ಬೆಂಗಳೂರು: ವೈವಾಹಿಕ ಜಾಲತಾಣ ಮೂಲಕ ಯುವತಿಯೊಬ್ಬರನ್ನು ಪರಿಚಯಿಸಿಕೊಂಡ ವರನೊಬ್ಬ, ವಧು ನೋಡುವ ಶಾಸ್ತ್ರ ಮುಗಿಸಿ ₹5.20 ಲಕ್ಷ ಪಡೆದುಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ನೊಂದ 29 ವರ್ಷದ ಯುವತಿ, ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಮಂಡ್ಯದವರೆಂದು ಹೇಳಲಾಗಿರುವ ಆರೋಪಿ ಮಧುಸೂದನ್ (32) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ವರನನ್ನು ಹುಡುಕುತ್ತಿದ್ದ ಯುವತಿ, ವೈವಾಹಿಕ ಜಾಲತಾಣದಲ್ಲಿ ಖಾತೆ ತೆರೆದು ಸ್ವ–ವಿವರ ನಮೂದಿಸಿದ್ದರು. ಮೇ 29ರಂದು ಪರಿಚಯವಾಗಿದ್ದ ಮಧುಸೂದನ್, ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಮೇ 31ರಂದು ಯುವತಿ ಮನೆಗೂ ಹೋಗಿ ವಧು ನೋಡಿಕೊಂಡು ಹೋಗಿದ್ದರು. ಈ ಸಂಗತಿಯನ್ನು ಯುವತಿಯೇ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಅನಾಥರೆಂದು ಹೇಳಿದ್ದ ಆರೋಪಿ, ನಗರದಲ್ಲಿ ಹೊಸ ಮನೆ ಖರೀದಿಸುವ ನೆಪದಲ್ಲಿ ಯುವತಿಯಿಂದ ₹ 5.20 ಲಕ್ಷ ಪಡೆದಿದ್ದ. ನಂತರ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.