ADVERTISEMENT

ಉನ್ನತ ಶಿಕ್ಷಣಕ್ಕೆ ಬರುವವರ ಪ್ರಮಾಣ ಕೇವಲ ಶೇ 27: ಶೈಲೇಶ್ ನಾಯಕ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 18:15 IST
Last Updated 23 ಆಗಸ್ಟ್ 2024, 18:15 IST
   

ಬೆಂಗಳೂರು: ‘ದೇಶದಲ್ಲಿ 40 ಸಾವಿರ ಕಾಲೇಜುಗಳು, ಒಂದು ಸಾವಿರ ವಿಶ್ವವಿದ್ಯಾಲಯಗಳು ಮತ್ತು ಸುಮಾರು ಮೂರು ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಆದರೆ ಇವರಲ್ಲಿ ಉನ್ನತ ಶಿಕ್ಷಣಕ್ಕೆ ಬರುವವರ ಪ್ರಮಾಣ ಶೇ 27ರಷ್ಟು ಮಾತ್ರ. ಇದು ಕಳವಳಕಾರಿ ವಿಷಯ’ ಎಂದು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ ಸ್ಟಡೀಸ್‌ನ ನಿರ್ದೇಶಕ ಶೈಲೇಶ್ ನಾಯಕ್‌ ಹೇಳಿದರು.

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ (ಎಬಿಆರ್‌ಎಸ್‌ಎಂ) ಮತ್ತು ಬೆಂಗಳೂರಿನ ಅಲೆಯನ್ಸ್‌ ವಿಶ್ವವಿದ್ಯಾಲಯ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ, ‘ಸಮರ್ಥ ಭಾರತಕ್ಕಾಗಿ ಒಳಗೊಳ್ಳುವಿಕೆಯ ಶಿಕ್ಷಣ ನೀತಿ’ ವಿಚಾರ ಸಂಕಿರಣ  ಉದ್ಘಾಟಿಸಿ ಅವರು ಮತನಾಡಿದರು.

‘ಎಲ್ಲರಿಗೂ ಕೈಗೆಟಕುವ, ಎಲ್ಲರನ್ನೂ ಒಳಗೊಳ್ಳುವಂತಹ ಶೈಕ್ಷಣಿಕ ವಾತಾವರಣವನ್ನು ರೂಪಿಸಬೇಕು. ಶಿಕ್ಷಣದಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಒತ್ತು ನೀಡುತ್ತದೆ’ ಎಂದರು.

ADVERTISEMENT

‘ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ ಅಭಿವೃದ್ಧಿಗೂ ರಾಷ್ಟ್ರೀಯ ಶಿಕ್ಷಣ ನೀತಿ ಕೆಲಸ ಮಾಡುತ್ತದೆ’ ಎಂದು ಎಬಿಆರ್‌ಎಸ್‌ಎಂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಗುಂತಾ ಲಕ್ಷ್ಮಣ್‌ ಹೇಳಿದರು.

ಅಲೆಯನ್ಸ್‌ ವಿಶ್ವವಿದ್ಯಾಲಯದ ಕುಲಪತಿ ಅಭಯ್ ಜಿ. ಛಬ್ಬಿ ಮಾತನಾಡಿ, ‘ಶಿಕ್ಷಣದಲ್ಲಿ ಬಡವ–ಶ್ರೀಮಂತ, ಹೆಣ್ಣು–ಗಂಡು ಎಂಬ ತಾರತಮ್ಯ ಇರಬಾರದು. ರಾಷ್ಟ್ರೀಯ ಶಿಕ್ಷಣ ನೀತಿಯು ಸರ್ವರಿಗೂ ಸಮಾನ ಶಿಕ್ಷಣವನ್ನು ಒದಗಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.