ADVERTISEMENT

ಚಿತ್ರ ಸಂಗೀತ ಶ್ರೀಮಂತಗೊಳಿಸಿದ ವಿಜಯಭಾಸ್ಕರ್‌: ಚಿದಂಬರ ಕಾಕತ್ಕರ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 23:55 IST
Last Updated 20 ಅಕ್ಟೋಬರ್ 2024, 23:55 IST
<div class="paragraphs"><p>ಸಂಗೀತ ಸಾಮ್ರಾಟ್‌ ವಿಜಯಭಾಸ್ಕರ್‌ ಜನ್ಮ ಶತಮಾನೋತ್ಸವ ಭಾನುವಾರ ಆಯೋಜಿಸಿದ್ದ ‘ಚಿತ್ರರಂಗಕ್ಕೆ ವಿಜಯಭಾಸ್ಕರ್‌ ಅವರ ಕೊಡುಗೆಗಳು’ ಎಂಬ ಗೋಷ್ಠಿಯಲ್ಲಿ ಬಿ.ಕೆ. ಸುಮಿತ್ರಾ, ದೊಡ್ಡರಂಗೇಗೌಡ, ಚಿದಂಬರ ಕಾಕತ್ಕರ್ ಮತ್ತು ಎನ್.ಎಸ್ ಶ್ರೀಧರ್ ಮೂರ್ತಿ ಪಾಲ್ಗೊಂಡಿದ್ದರು&nbsp;</p></div>

ಸಂಗೀತ ಸಾಮ್ರಾಟ್‌ ವಿಜಯಭಾಸ್ಕರ್‌ ಜನ್ಮ ಶತಮಾನೋತ್ಸವ ಭಾನುವಾರ ಆಯೋಜಿಸಿದ್ದ ‘ಚಿತ್ರರಂಗಕ್ಕೆ ವಿಜಯಭಾಸ್ಕರ್‌ ಅವರ ಕೊಡುಗೆಗಳು’ ಎಂಬ ಗೋಷ್ಠಿಯಲ್ಲಿ ಬಿ.ಕೆ. ಸುಮಿತ್ರಾ, ದೊಡ್ಡರಂಗೇಗೌಡ, ಚಿದಂಬರ ಕಾಕತ್ಕರ್ ಮತ್ತು ಎನ್.ಎಸ್ ಶ್ರೀಧರ್ ಮೂರ್ತಿ ಪಾಲ್ಗೊಂಡಿದ್ದರು 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ಅವರು ಕನ್ನಡ ಚಿತ್ರಗೀತೆಗಳಿಗೆ ಹೊಸತನವನ್ನು ನೀಡಿ, ಚಿತ್ರ ಸಂಗೀತವನ್ನು ಶ್ರೀಮಂತಗೊಳಿಸಿದರು’ ಎಂದು ಸಂಗೀತ ತಜ್ಞ ಚಿದಂಬರ ಕಾಕತ್ಕರ್‌ ಹೇಳಿದರು.

ADVERTISEMENT

ಸಂಗೀತ ಸಾಮ್ರಾಟ್‌ ವಿಜಯಭಾಸ್ಕರ್‌ ಜನ್ಮಶತಮಾನೋತ್ಸವ ಸಮಿತಿ ಭಾನುವಾರ ಆಯೋಜಿಸಿದ್ದ‘ಚಿತ್ರರಂಗಕ್ಕೆ ವಿಜಯಭಾಸ್ಕರ್‌ ಅವರ ಕೊಡುಗೆಗಳು’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ವಿಜಯಭಾಸ್ಕರ್‌ ಅವರು ನಿರ್ದೇಶಿಸಿರುವ ಹಾಡುಗಳನ್ನು ನಾನು ಆಕಾಶವಾಣಿಯಲ್ಲಿ ಕೇಳಿ ಬೆಳೆದಿದ್ದೇನೆ. ಕನ್ನಡದಲ್ಲಿ ಬಂದ ಸಂಪೂರ್ಣ ರಾಮಾಯಣ ಚಿತ್ರಕ್ಕೂ ವಿಜಯಭಾಸ್ಕರ್‌ ಅವರು ಸಂಗೀತ ನಿರ್ದೇಶನ ಮಾಡಿದ್ದರು. 1963ರಲ್ಲಿ ತೆರೆಕಂಡ ತುಕಾರಾಮ ಚಿತ್ರದ ‘ಜಯತು ಜಯ ವಿಠಲ’ ಎಂಬ ಹಾಡು ಇಂದಿಗೂ ಪ್ರಸ್ತುತವಾಗಿದೆ’ಎಂದು ಮೆಲುಕು ಹಾಕಿದರು.

ಚಲನಚಿತ್ರ ನಟ ಶ್ರೀನಾಥ್‌ ಮಾತನಾಡಿ, ‘ವಿಜಯಭಾಸ್ಕರ್‌ ಅವರು ನನ್ನ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರಿಗೆ ಸಾಹಿತ್ಯದ ಕಡೆಗೂ ಹೆಚ್ಚು ಒಲವಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಮತ್ತು ವಿಜಯಭಾಸ್ಕರ್‌ ಜೋಡಿ ಬಹಳ ಚೆನ್ನಾಗಿತ್ತು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ‘ನೀನೇ ಸಾಕಿದ ಗಿಣಿ’ ಹಾಡು ಇಂದಿಗೂ ಜನಮಾನಸದಲ್ಲಿ ಉಳಿದಿರುವುದು’ ಎಂದು ನೆನಪಿಸಿಕೊಂಡರು.

ಇದೇ ಸಂದರ್ಭದಲ್ಲಿ ಎನ್.ಎಸ್. ಶ್ರೀಧರ ಮೂರ್ತಿಯವರು ಬರೆದಿರುವ ವಿಜಯಭಾಸ್ಕರ್ ಜೀವನ ಮತ್ತು ಸಾಧನೆ ಕುರಿತ ʼಎಲ್ಲೆಲ್ಲೂ ಸಂಗೀತವೇʼ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಗಾಯಕಿ ಬಿ.ಕೆ. ಸುಮಿತ್ರಾ, ಸಾಹಿತಿ ದೊಡ್ಡರಂಗೇಗೌಡ, ಚಲನಚಿತ್ರ ನಟ ಶ್ರೀಧರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.