ADVERTISEMENT

ಸ್ಯಾಂಕಿ ಟ್ಯಾಂಕ್‌ ರಸ್ತೆಯಲ್ಲಿ ಮೇಲ್ಸೇತುವೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 0:09 IST
Last Updated 4 ಫೆಬ್ರುವರಿ 2023, 0:09 IST

ಬೆಂಗಳೂರು: ಸ್ಯಾಂಕಿ ಟ್ಯಾಂಕ್‌ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಮಾಡುವ ಬಿಬಿಎಂಪಿ ನಿರ್ಧಾರಕ್ಕೆ ಆಮ್‌ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ.

‘ಬಿಬಿಎಂಪಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದುಪಡಿಸಿ ಜನರ ಅಗತ್ಯಕ್ಕೆ ತಕ್ಕಂತೆ ವಿಶ್ವದರ್ಜೆಯ
ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.

‘ಈಗಾಗಲೇ ಇಂತಹ ಅನೇಕ ಯೋಜನೆಗಳು ನಗರಕ್ಕೆ ಸಾಕಷ್ಟು ಹಾನಿ ಮಾಡಿದ್ದು, ಅವುಗಳ ಸಾಲಿಗೆ ಮತ್ತೊಂದನ್ನು ಸೇರ್ಪಡೆ ಮಾಡುವ ಅಗತ್ಯವಿಲ್ಲ. ನಗರದ ಯೋಜನೆಯನ್ನು ಮಹಾನಗರ ಯೋಜನಾ ಸಮಿತಿಯು ರೂಪಿಸಬೇಕು ಹಾಗೂ ಸಂಚಾರ ವ್ಯವಸ್ಥೆಯ ಯೋಜನೆ
ಗಳನ್ನು ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಪ್ರಾಧಿಕಾರವು ಗುರುತಿಸಿ, ಯೋಜನೆ ರೂಪಿಸಬೇಕು. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ
ತಾಂಡವವಾಡುತ್ತಿದ್ದು, ಮೇಲ್ಸೇತುವೆ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡರೆ ಅದು ಮತ್ತೊಂದು ದುರಂತವಾಗಲಿದೆ’ ಎಂದು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಚುನಾಯಿತ ಸರ್ಕಾರ ಮೊದಲು ಜನರ ಭಾವನೆ ಗೌರವಿಸಬೇಕು. ಯೋಜನೆಯನ್ನು ರೂಪಿಸುವಾಗ ಜನರನ್ನು ಸಂಪರ್ಕಿಸಿ ಅವರ
ಅಭಿಪ್ರಾಯವನ್ನು ಕೇಳಿಲ್ಲ. ಈ ರೀತಿ ಜನರ ಅಭಿಪ್ರಾಯವನ್ನೂ ನಿರ್ಲಕ್ಷಿಸಿ ಯೋಜನೆಯ ಪ್ರಸ್ತಾವ ರೂಪಿಸುವುದನ್ನು ಆಮ್‌ ಆದ್ಮಿ ಪಾರ್ಟಿಯ ಕರ್ನಾಟಕ ಘಟಕ ವಿರೋಧಿಸುತ್ತದೆ’ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.