ಬೆಂಗಳೂರು: ನಟ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾವನ್ನು ಫೇಸ್‌ಬುಕ್‌ನಲ್ಲಿ ಲೈನ್ ಮಾಡಿ ಲಿಂಕ್ ಶೇರ್ ಮಾಡಿದ್ದ ಆರೋಪದಡಿ ರಾಕೇಶ್ ಎಂಬಾತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:4 ಸಾವಿರ ಥಿಯೇಟರ್ಗೆ 'ಪೈಲ್ವಾನ್' ಲಗ್ಗೆ
ನೆಲಮಂಗಲದ ರಾಕೇಶ್, ಇತ್ತೀಚೆಗೆ ಚಿತ್ರಮಂದಿರದಲ್ಲಿ ಫೇಸ್‌ಬುಕ್ ಲೈವ ಮಾಡಿದ್ದ. ಅದನ್ನು ಹಲವರು ಪೈರಸಿ ಮಾಡಿದ್ದರು. ಈ ಸಂಬಂಧ ಸಿನಿಮಾ ನಿರ್ಮಾಪಕಿ ಸ್ವಪ್ನ ಕೃಷ್ಣ ದೂರು ನೀಡಿದ್ದರು.
ಆರೋಪಿ, ಪೂರ್ತಿ ಸಿನಿಮಾ ನೋಡಲು ಇನ್ ಬಾಕ್ಸ್ಗೆ ಮೆಸೇಜ್ ಮಾಡಿ ಎಂದು ಪೋಸ್ಟ್ ಸಹ ಪ್ರಕಟಿಸಿದ್ದ.
ಇದನ್ನೂ ಓದಿ:ಬೆದರಿಕೆಗೆ ಜಗ್ಗೊನಲ್ಲ ಪೈಲ್ವಾನ್
‘ಸಾಕಷ್ಟು ಶ್ರಮ ವಹಿಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಿಸಲಾಗಿದೆ. 3 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಂಡಿದೆ. ಯಾರೋ ಕಿಡಿಗೇಡಿಗಳು, ಒಂದೇ ದಿನದಲ್ಲೇ ಸಿನಿಮಾದ ಪೈರಸಿ ಮಾಡಿದ್ದಾರೆ. ಟೆಲಿಗ್ರಾಂ ಆ್ಯಪ್ ಹಾಗೂ ನಾನಾ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ’ ಎಂದು ಸ್ವಪ್ನ ಕೃಷ್ಣ ದೂರಿದ್ದರು.
ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, ‘ಸಿನಿಮಾದ ಪೈರಸಿ ಲಿಂಕ್ ಅನ್ನು ಫೇಸ್‌ಬುಕ್‌ನಲ್ಲಿ ಹರಿಬಿಡಲಾಗಿದೆ. ಆ ಬಗ್ಗೆ ನಿರ್ಮಾಪಕರು ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದರು.
3,500ಕ್ಕೂ ಹೆಚ್ಚು ಲಿಂಕ್: ದೂರು ಸಲ್ಲಿಕೆ ನಂತರ ಮಾತನಾಡಿದ್ದಸ್ವಪ್ನ ಕೃಷ್ಣ, ‘ಸಿನಿಮಾದ ಪೈರಸಿಯ 3,500ಕ್ಕೂ ಹೆಚ್ಚು ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಆ ಬಗ್ಗೆ ಪೊಲೀಸರಿಗೂ ತಿಳಿಸಲಾಗಿದೆ’ ಎಂದು ಹೇಳಿದರು.
‘ನಟ ದರ್ಶನ್ ಅಭಿಮಾನಿಗಳು ಪೈರಸಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಜವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರ‍್ಯಾರು ಮಾಡಿಲ್ಲ. ಇದು ಯಾರೋ ಕಿಡಿಗೇಡಿಗಳ ಕೃತ್ಯ. ಯಾರೇ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಮಾರಕ’ ಎಂದು ಹೇಳಿದ್ದರು.
ಇದನ್ನೂ ಓದಿ:ನಟ ದರ್ಶನ್ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.